Sunday, October 25, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Front Page ನಾಗರಿಕ ಸೇವೆ ಮತ್ತು ಐಎಫ್ ಎಸ್ ಎರಡನ್ನೂ ಪಾಸ್ ಮಾಡಿ ಇತಿಹಾಸ ಸೃಷ್ಟಿಸಿದ ಮೈಸೂರಿನ ಹುಡುಗಿ...

ನಾಗರಿಕ ಸೇವೆ ಮತ್ತು ಐಎಫ್ ಎಸ್ ಎರಡನ್ನೂ ಪಾಸ್ ಮಾಡಿ ಇತಿಹಾಸ ಸೃಷ್ಟಿಸಿದ ಮೈಸೂರಿನ ಹುಡುಗಿ ಪೂಜಾ ಎಂ..!

ಮೈಸೂರು,ಜುಲೈ,4,2023(www.justkannada.in): ಮೈಸೂರಿನ ಎಂ.ಜಿ ಬೇಂದ್ರೆ ಮತ್ತು ಪದ್ಮಾವತಿ ಎಂ. ಅವರ ಪುತ್ರಿ ಪೂಜಾ. ಎಂ ಅವರು 2022 ನೇ ವರ್ಷಕ್ಕೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ನಾಗರಿಕ ಸೇವೆ ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆಗಳಲ್ಲಿ ಎರಡು ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಪೂಜಾ ಅವರು ನಾಗರಿಕ ಸೇವೆಯಲ್ಲಿ  390ನೇ RANK ಗಳಿಸಿದ್ದರು. ಬಳಿಕ ಅವರು ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ 45 ನೇ ಸ್ಥಾನವನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

14 ಲಕ್ಷ ಆಕಾಂಕ್ಷಿಗಳಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಪೂಜಾ ಎಂ. ಅವರು ಒಬ್ಬರಾಗಿದ್ದಾರೆ. ಪೂಜಾ ಅವರು ತಮ್ಮ ಸ್ವಯಂ ಅಧ್ಯಯನಕ್ಕೆ ಹೆಸರುವಾಸಿಯಾಗಿದ್ದು, ಜ್ಞಾನಬುತ್ತಿ ಸಂಸ್ಥೆಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿರುವುದಾಗಿ ಅವರು ಹೆಮ್ಮೆಪಡುತ್ತಾರೆ.

Key words: Pooja M -Mysore girl –passed- both -IAS – IFS -created history