Thursday, August 13, 2026

BDA Apartments

Home Front Page ವಿಧಾನ ಪರಿಷತ್ ಸದಸ್ಯರಾಗಿ ಜಗದೀಶ್ ಶೆಟ್ಟರ್ ಸೇರಿ ಮೂವರು ಪ್ರಮಾಣ ವಚನ ಸ್ವೀಕಾರ.

ವಿಧಾನ ಪರಿಷತ್ ಸದಸ್ಯರಾಗಿ ಜಗದೀಶ್ ಶೆಟ್ಟರ್ ಸೇರಿ ಮೂವರು ಪ್ರಮಾಣ ವಚನ ಸ್ವೀಕಾರ.

ಬೆಂಗಳೂರು,ಜುಲೈ,3,2023(www.justkannada.in): ವಿಧಾನ ಪರಿಷತ್ ಸದಸ್ಯರಾಗಿ ಜಗದೀಶ್ ಶೆಟ್ಟರ್ ಸೇರಿ ಇಂದು ಮೂವರು ಪ್ರಮಾಣ ವಚನ ಸ್ವೀಕಾರ ಮಾಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು, ಬೋಸರಾಜು  ಅವರು ಪ್ರಮಾಣ ವಚನ ಸ್ವೀಕರಿಸಿದರು.

ಈ ವೇಳೆ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ,  ಸಚಿವರಾದ ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಸಚಿವ ಎಚ್.ಕೆ‌ ಪಾಟೀಲ್, ಶಾಸಕರಾದ ಕೋನರೆಡ್ಡಿ, ಅಲ್ಲಮಪ್ರಭು ಪಾಟೀಲ್, ಹಂಪಯ್ಯ ನಾಯ್ಕ್, ಅಲ್ಲಮಪ್ರಭು ಪಾಟೀಲ್ ಉಪಸ್ಥಿತರಿದ್ದರು.

Key words: Jagdish Shettar –bosaraju-thippannappa-sworn -Legislative Council- member.