Saturday, August 22, 2026

BDA Apartments

Home Front Page ಮುಕ್ತ ವಿವಿ ವಾರ್ಷಿಕ ಘಟಿಕೋತ್ಸವ: ಎನ್.ರಾಮಚಂದ್ರಯ್ಯ, ವೆಂಕಟಲಕ್ಷ್ಮಿನರಸಿಂಹ ರಾಜುಗೆ ‘ಗೌಡಾ’ ಪ್ರದಾನ

ಮುಕ್ತ ವಿವಿ ವಾರ್ಷಿಕ ಘಟಿಕೋತ್ಸವ: ಎನ್.ರಾಮಚಂದ್ರಯ್ಯ, ವೆಂಕಟಲಕ್ಷ್ಮಿನರಸಿಂಹ ರಾಜುಗೆ ‘ಗೌಡಾ’ ಪ್ರದಾನ

ಮೈಸೂರು, ಜುಲೈ 02, 2023 (www.justkannada.in): ಮುಕ್ತ ವಿವಿ 18ನೇ ವಾರ್ಷಿಕ ಘಟಿಕೋತ್ಸವ ಮುಕ್ತ ಗಂಗೋತ್ರಿಯಲ್ಲಿರುವ ಘಟಿಕೋತ್ಸವ ಭವನದಲ್ಲಿ ನಡೆಯುತ್ತಿದೆ.

ಶಿಕ್ಷಣ ಕ್ಷೇತ್ರದ ಎನ್.ರಾಮಚಂದ್ರಯ್ಯ, ವೆಂಕಟಲಕ್ಷ್ಮಿ ನರಸಿಂಹ ರಾಜು ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌(ಡಿ.ಲಿಟ್) ಸ್ವೀಕರಿಸಿದರು.

ಈ ಇಬ್ಬರು ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಪ್ರದಾನ ಮಾಡಿದರು.

ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಗೈರಾಗಿದ್ದರು. ಹೈಕೋರ್ಟ್ ನ್ಯಾಯಾಧೀಶ ಅಶೋಕ ಎಸ್ ಕಿಣಗಿ, ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಇತರರು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.