ಬೆಂಗಳೂರು,ಜೂನ್,26,2023(www.justkannada.in) ನಿವೇಶನ ನೀಡುವುದಾಗ ಹೇಳಿ ಚಿತ್ರನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರಿಂದ ₹18.50 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದ್ದು ಈ ಕುರಿತು ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಲ್ಟಿ ಲೀಪ್ ವೆಂಚರ್ಸ್ ಕಂಪನಿಯಿಂದ ನಟ ಮಾಸ್ಟರ್ ಆನಂದ್ ವಂಚನೆಗೊಳಗಾಗಿದ್ದು ಕಂಪನಿ ವಿರುದ್ಧ ದೂರು ದಾಖಲಿಸಿದ್ದಾರೆ. ಕೊಮ್ಮಘಟ್ಟದ ರಾಮಸಂದ್ರ ಗ್ರಾಮಕ್ಕೆ ಚಿತ್ರೀಕರಣಕ್ಕೆಂದು ಹೋದಾಗ ಮಾಸ್ಟರ್ ಆನಂದ್ ನಿವೇಶನಗಳನ್ನು ನೋಡಿದ್ದರು.
ಮಲ್ಟಿ ಲೀಪ್ ವೆಂಚರ್ಸ್ ಕಂಪನಿಯು ರಾಮಸಂದ್ರದಲ್ಲಿರುವ 2000 ಅಡಿ ವಿಸ್ತ್ರೀರ್ಣದ ನಿವೇಶನ ತೋರಿಸಿದ್ದು, ₹ 70 ಲಕ್ಷಕ್ಕೆ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಮಾಸ್ಟರ್ ಆನಂದ್ ಹಂತ ಹಂತವಾಗಿ ₹ 18.50 ಲಕ್ಷ ಮುಂಗಡ ಹಣ ನೀಡಿದ್ದರು ಎನ್ನಲಾಗಿದೆ.
ಈ ಮಧ್ಯೆ ಕಂಪನಿಯೂ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಮುಂಗಡ ಹಣವನ್ನೂ ವಾಪಸ್ ನೀಡಿಲ್ಲ ಎಂದು ನಟ ಮಾಸ್ಟರ್ ಆನಂದ್ ಆರೋಪಿಸಿ ದೂರು ನೀಡಿದ್ದಾರೆ.
Key words: Actor- Master Anand -fraud – Rs 18.5 lakh-Complaint- filed.






