Wednesday, July 29, 2026

BDA Apartments

Home Front Page ಸಿದ‍್ಧರಾಮಯ್ಯ ಬಿಜೆಪಿ ಕೇಳಿ ಅಕ್ಕಿ ಕೊಡ್ತೀವಿ ಎಂದಿದ್ರಾ..? ಮಾಜಿ ಸಚಿವ ಆರ್.ಅಶೋಕ್.

ಸಿದ‍್ಧರಾಮಯ್ಯ ಬಿಜೆಪಿ ಕೇಳಿ ಅಕ್ಕಿ ಕೊಡ್ತೀವಿ ಎಂದಿದ್ರಾ..? ಮಾಜಿ ಸಚಿವ ಆರ್.ಅಶೋಕ್.

ಬೆಂಗಳೂರು,ಜೂನ್,23,2023(www.justkannada.in): ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಆರ್.ಅಶೋಕ್, ಸಿದ್ದರಾಮಯ್ಯ ಬಿಜೆಪಿ ಕೇಳಿ ಅಕ್ಕಿ ಕೊಡ್ತೀವಿ ಎಂದಿದ್ರಾ..?  ನರೇಂದ್ರ ಮೋದಿ ಕೇಳಿ ಅಕ್ಕಿ ಕೊಡ್ತೀವಿ ಎಂದಿದ್ರಾ..?  10 ಕೆಜಿ ಅಕ್ಕಿ ಕೊಡ್ತೇವೆ ಎನ್ನುವಾಗ ಅವರಿಗೆ ಜ್ಞಾನ ಇರಲಿಲ್ವಾ..? ಇದು 15 ಸಾವಿರ ಕೋಟಿ ರೂಪಾಯಿ ಯೋಜನೆ. ಯಾರನ್ನ ಕೇಳಿದ್ರಿ..? ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡ್ತಿಲ್ಲ ಎಂದು ಕೇಳುತ್ತೀರಾ.  ಬೇರೆ ರಾಜ್ಯಗಳಿಗೆ ಕೇಂದ್ರ ಹೆಚ್ಚುವರಿ ಅಕ್ಕಿ ಕೊಡ್ತಾ ಇದೆಯಾ.? ನೀವೇನು ಆಕಾಶದಿಂದ ಇಳಿದು ಬಂದಿದ್ದೀರಾ..? ಎಂದು ಆರ್.ಅಶೋಕ್ ಗುಡುಗಿದರು.

Key words: Siddramaiah – BJP – give- rice? Former Minister- R. Ashok.