Tuesday, September 15, 2026

BDA Apartments

ಸಂಸದ ಪ್ರತಾಪ್ ಸಿಂಹಗೆ ಬಹಿರಂಗ ಸವಾಲೆಸೆದ ‘ಕೈ’ ಶಾಸಕ ಪ್ರದೀಪ್ ಈಶ್ವರ್ BDA JK_Adv B...
Home Front Page ಸಂಸದ ಪ್ರತಾಪ್ ಸಿಂಹಗೆ ಬಹಿರಂಗ ಸವಾಲೆಸೆದ ‘ಕೈ’ ಶಾಸಕ ಪ್ರದೀಪ್ ಈಶ್ವರ್.

ಸಂಸದ ಪ್ರತಾಪ್ ಸಿಂಹಗೆ ಬಹಿರಂಗ ಸವಾಲೆಸೆದ ‘ಕೈ’ ಶಾಸಕ ಪ್ರದೀಪ್ ಈಶ್ವರ್.

ಚಿಕ್ಕಬಳ್ಳಾಫುರ,ಜೂನ್,23,2023(www.justkannada.in): ಮೊದಲ ಬಾರಿಗೆ ಗೆದ್ದಿರುವ ಶಾಸಕರಿಗೆ, ಗೊತ್ತಿಲ್ಲದವರಿಗೆ ಹಿರಿಯ ಶಾಸಕರು ಒರಿಯಂಟೇಶನ್ ಪ್ರೋಗ್ರಾಂ ನಡೆಸುವ ಅಗತ್ಯವಿದೆ ಎಂದು ಹೇಳಿಕೆ ನೀಡಿದ್ಧ ಮೈಸೂರು-ಕೊಡಗು  ಸಂಸದ ಪ್ರತಾಪ್ ಸಿಂಹಗೆ  ಕಾಂಗ್ರೆಸ್ ಶಾಸಕ ಪ್ರದೀಪ್​ ಈಶ್ವರ್​  ತಿರುಗೇಟು ನೀಡಿದ್ದಾರೆ.

ಇಂದು ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್,  ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಬಗ್ಗೆ ವೈಯಕ್ತಿಕ ಹೇಳಿಕೆ ಕೊಡುತ್ತಿದ್ದಾರೆ. ವಿಷಯಾಧಾರಿತ ಬಿಟ್ಟು ವೈಯಕ್ತಿಕ ವಿಚಾರ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಾಪ್ ಸಿಂಹ ಅವರೇ ನೀವು ಪತ್ರಕರ್ತರಾಗಿದ್ದಾಗ ಸ್ವಲ್ಪ ಓದುತ್ತಿದ್ರಿ. ಸಂಸದರಾದ ಮೇಲೆ ಓದೋದು ಬಿಟ್ಟಿದ್ದೀರಿ.​ ನಿಮಗೆ ತಾಕತ್​ ಇದ್ದರೆ ಎಫ್ ​ಸಿಐ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಪ್ರತಾಪ್ ಸಿಂಹ ಏನೇನೋ ಮಾತನಾಡುತ್ತಾರೆ. ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಆಗುತ್ತೇನ್ರಿ? ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡೇ ಗೆದ್ದಿದ್ದೀರಿ. ನಿಮ್ಮ ವೈಯಕ್ತಿಕ ವರ್ಚಸ್ಸು ಏನು, ನಿಮ್ಮ ಸಾಧನೆ ಏನು ಹೇಳಿ?  ಎಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು.ಸಂಸದ ಪ್ರತಾಪ್ ಸಿಂಹಗೆ ಬಹಿರಂಗ ಸವಾಲೆಸೆದ ‘ಕೈ’ ಶಾಸಕ ಪ್ರದೀಪ್ ಈಶ್ವರ್ prathap

ಫುಡ್ ಕಾರ್ಪೊರೇಷನ್ ಇಂಡಿಯಾಗೆ ಒಂದು ಇತಿಹಾಸ ಇದೆ. ಅದಕ್ಕೆ ದೊಡ್ಡ ವ್ಯವಸ್ಥೆ ಇದೆ. ಅಲ್ಲಿ ಶೇಖರಣೆಯಾಗುವ ದವಸ ಧಾನ್ಯ ಬಡವರಿಗೆ ತಲುಪಿಸಬೇಕಾಗಿರುವುದು ಅದರ ಜವಾಬ್ದಾರಿ. ಅದೇ ರೀತಿಯಾಗಿ ಫುಡ್ ಕಾರ್ಪೊರೇಷನ್ ಇಂಡಿಯಾ ಅಕ್ಕಿ ಕೊಡುತ್ತೇವೆ ಎಂದು ಹೇಳಿತ್ತು. ಅದಕ್ಕೆ ಹಣ ಕಟ್ಟಿ ಅಂತ ಹೇಳಿತ್ತು, ಇದನ್ನು ಗೊಡನ್ನಾ ಎಂದು ಕರಿತರಲ್ಲ ಇಂಥವರಿಗೆ ಏನು ಹೇಳಬೇಕು. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಬೈದರೆ ಸ್ಥಾನಮಾನ ಸಿಗುತ್ತದೆ ಎಂಬ ಭ್ರಮೆಯಲ್ಲಿ ಪ್ರತಾಪ್​​ ಸಿಂಹ ಇದ್ದಾರೆ. ಹಾಗಾಗಿ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ​​ರನ್ನು ಬೈಯ್ಯುತ್ತಿದ್ದಾರೆ  ಎಂದು ಪ್ರದೀಪ್ ಈಶ್ವರ್ ಹರಿಹಾಯ್ದರು.

Key words: MLA- Pradeep Eshwar -openly –challenged- MP- Pratap Simha.