Monday, October 12, 2026

Dasara Wishes

Happy Dasara
Home Front Page ಸಿದ್ಧರಾಮಯ್ಯ ಬಗ್ಗೆ ಟೀಕಿಸಿದ್ದ ಸಂಸದ ಶ್ರೀನಿವಾಸ್ ಪ್ರಸಾದ್ ಗೆ ಪರೋಕ್ಷ ಟಾಂಗ್ ಕೊಟ್ಟ ಸಚಿವ ಹೆಚ್.ಸಿ...

ಸಿದ್ಧರಾಮಯ್ಯ ಬಗ್ಗೆ ಟೀಕಿಸಿದ್ದ ಸಂಸದ ಶ್ರೀನಿವಾಸ್ ಪ್ರಸಾದ್ ಗೆ ಪರೋಕ್ಷ ಟಾಂಗ್ ಕೊಟ್ಟ ಸಚಿವ ಹೆಚ್.ಸಿ ಮಹದೇವಪ್ಪ.

ಮೈಸೂರು,ಜೂನ್,10,2023(www.justkannada.in): ಸಿಎಂ ಸಿದ್ಧರಾಮಯ್ಯ ಬಗ್ಗೆ ಟೀಕಿಸಿದ್ದ ಸಂಸದ ಶ್ರೀನಿವಾಸ್ ಪ್ರಸಾದ್ ಗೆ ಸಚಿವ ಹೆಚ್.ಸಿ ಮಹದೇವಪ್ಪ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

ಬಿಳಿಗೆರೆಯಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಚುನಾವಣೆ ವೇಳೆ ಸಿದ್ದರಾಮಯ್ಯ ಬಗ್ಗೆ ಸಾಕಷ್ಟು ಟೀಕೆ ಮಾಡಿದ್ದರು. ಮಧ್ಯಾಹ್ನ ಎದ್ದೇಳುವ ವ್ಯಕ್ತಿಗಳೆಲ್ಲ ಸಿದ್ದರಾಮಯ್ಯ ಬಗ್ಗೆ ಮಾತಾಡಿದ್ದರು ಎಂದು ಪರೋಕ್ಷವಾಗಿ ಶ್ರೀನಿವಾಸ್ ಪ್ರಸಾದ್​ ವಿರುದ್ಧ ವಾಗ್ದಾಳಿ ಮಾಡಿದರು.

ಸಿದ್ಧರಾಮಯ್ಯ ಸೋತು ಮನೆ ಸೇರುತ್ತಾರೆ ಎಂದು ಟೀಕೆ ಮಾಡಿದ್ದರು. ಆದರೆ ಮೇ 13 ರಂದು ಸಿದ್ಧರಾಮಯ್ಯ ಅಭೂತ ಪೂರ್ವ  ಜಯ ಸಾಧಿಸಿದ್ದರು. ಸಿಎಂ ಆದ ಬಳಿಕ ಅನ್ನಭಾಗ್ಯ ಯೋಜನೆಗೆ ಮೊದಲ ಸಹಿ ಹಾಕಿದರು ಎಂದು ಸಚಿವ ಹೆಚ್.ಸಿ ಮಹದೇವಪ್ಪ ನುಡಿದರು.

Key words: Minister -HC Mahadevappa – indirect -tong – MP Srinivas Prasad