Wednesday, September 30, 2026

BDA Apartments

ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ಬಾಲಕರು ನೀರುಪಾಲು BDA JK_Adv BDA Adv
Home Crime ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ಬಾಲಕರು ನೀರುಪಾಲು..

ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ಬಾಲಕರು ನೀರುಪಾಲು..

ಮೈಸೂರು,ಮೇ,23,2023(www.justkannada.in): ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ  ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆದಿದೆ.

ತಲಕಾಡಿನ ಕಾವೇರಿ ನಿಸರ್ಗಧಾಮದಲ್ಲಿ ಈ ಘಟನೆ ನಡೆದಿದೆ. ಲೋಹಿತ್(15), ಯತೀಶ್(13) ಮೃತಪಟ್ಟ ಬಾಲಕರು. ಇಬ್ಬರು ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ರವಿಗೌಡರ ಪುತ್ರರು.ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ಬಾಲಕರು ನೀರುಪಾಲು water death water

ಸ್ನೇಹಿತರ ಜೊತೆ ಬೆಂಗಳೂರಿನಿಂದ ತಲಕಾಡಿಗೆ ಆಗಮಿಸಿದ್ದ ಬಾಲಕರು, ಈಜಲು ನದಿಗೆ ಇಳಿದಿದ್ದರು. ಈ ವೇಳೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನು ಅಲ್ಲೇ ಇದ್ದ ಅಂಬಿಗರಿಂದ 6 ಬಾಲಕರ ರಕ್ಷಣೆ ಮಾಡಲಾಗಿದೆ. ಮಕ್ಕಳ ಮೃತದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ತಲಕಾಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Two boys- swim -Cauvery river – drowned.