Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಸಿಎಂ ಸಚಿವಾಲಯದ 191 ಅಧಿಕಾರಿ ಮತ್ತು ನೌಕರರ ಬಿಡುಗಡೆ

ಸಿಎಂ ಸಚಿವಾಲಯದ 191 ಅಧಿಕಾರಿ ಮತ್ತು ನೌಕರರ ಬಿಡುಗಡೆ

ಬೆಂಗಳೂರು, ಮೇ 21, 2023 (www.justkannada.in): ಸಿಎಂ ಸಚಿವಾಲಯದಲ್ಲಿ ಸ್ಥಳ ನಿಯುಕ್ತಿ, ನಿಯೋಜನೆ, ಒಪ್ಪಂದ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 191 ಅಧಿಕಾರಿ ಮತ್ತು ನೌಕರರನ್ನು ಬಿಡುಗಡೆ ಮಾಡಲಾಗಿದೆ.

ಬಾಕಿ ಇರುವ ಲ್ಯಾಪ್‌ಟಾಪ್‌, ಲೇಖನಿ ಸಾಮಗ್ರಿಗಳು ಸೇರಿದಂತೆ ಎಲ್ಲ ಭೌತಿಕ ಕಡತಗಳು, ಸ್ವೀಕೃತಿ, ವಾಹನ ಪಾಸ್‌, ಗುರುತಿನ ಚೀಟಿಗಳನ್ನು ಇಲಾಖೆಯ ಕಾರ್ಯದರ್ಶಿಗೆ ಹಿಂದಿರುಗಿಸಬೇಕು ಎಂದು ಸೂಚನೆ ನೀಡಲಾಗಿದೆ.

ಯಾವುದೇ ಸಾಮಗ್ರಿಗಳು ವ್ಯತ್ಯಾಸವಾದರೆ, ಕಳೆದುಹೋಗಿದ್ದರೆ ಸಚಿವಾಲಯದ ಆಪ್ತ ಕಾರ್ಯದರ್ಶಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.