Wednesday, August 12, 2026

BDA Apartments

Home Front Page ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನೂತನ ಸಚಿವ ಜಮೀರ್ ಅಹಮದ್ ಖಾನ್

ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನೂತನ ಸಚಿವ ಜಮೀರ್ ಅಹಮದ್ ಖಾನ್

ಬೆಂಗಳೂರು, ಮೇ 21, 2023 (www.justkannada.in): ನಿನ್ನೆ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿನೂತನ ಸಚಿವ ಜಮೀರ್ ಅಹಮದ್ ಖಾನ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನೂತನ ಸರ್ಕಾರದ ಸಂಪುಟದಲ್ಲಿ ಸೇರಿಕೊಂಡ ಜಮೀರ್ ಅಹಮದ್ ಖಾನ್ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮೊದಲ ಸಲ ಶಾಸಕರಾಗಿ, ಸಚಿವರಾಗಿದ್ದಲೂ ಇಂಗ್ಲಿಷ್​ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಆಗ ವಾಟಾಳ್ ನಾಗರಾಜ್, ಶ್ರೀರಾಮರೆಡ್ಡಿ ಸೇರಿದಂತೆ ಕನ್ನಡಪರ ಸಂಘಟನೆಗಳವರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೊನೆಗೆ ಸದನದಲ್ಲೇ ಕ್ಷಮೆ ಯಾಚಿಸಿದ್ದರು.

ಇದೀಗ ಮತ್ತೆ ಈ ಘಟನೆ ಮರುಕಳಿಸಿದೆ. 2005ರ ಈ ಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣ ಗೌಡ ಟ್ವಿಟ್ಟರ್ ನಲ್ಲಿ ಸ್ಮರಿಸಿದ್ದಾರೆ. ಅಂದು ಜಮೀರ್​ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?’ ಎಂದು ನಾರಾಯಣ ಗೌಡ ಪ್ರಶ್ನೆ ಮಾಡಿದ್ದಾರೆ.