Saturday, August 22, 2026

BDA Apartments

Home Front Page ನಾನು ಯಾವುದೇ ಖಾತೆಗೆ ನಿರೀಕ್ಷೆ ಮಾಡಿಲ್ಲ, ಬೇಡಿಕೆಯನ್ನೂ ಇಡುವುದಿಲ್ಲ- ರಾಮಲಿಂಗರೆಡ್ಡಿ.

ನಾನು ಯಾವುದೇ ಖಾತೆಗೆ ನಿರೀಕ್ಷೆ ಮಾಡಿಲ್ಲ, ಬೇಡಿಕೆಯನ್ನೂ ಇಡುವುದಿಲ್ಲ- ರಾಮಲಿಂಗರೆಡ್ಡಿ.

ಬೆಂಗಳೂರು,ಮೇ,20,2023(www.justkannada.in):  ಇಂದು ಸಿಎಂ ಮತ್ತು ಡಿಸಿಎಂ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು 8 ಶಾಸಕರಿಗೆ ಸಚಿವ ಸ್ಥಾನ ಒಲಿದಿದೆ. ಈ ನಡುವೆ  ಶಾಸಕ ರಾಮಲಿಂಗರೆಡ್ಡಿ ಅವರು ಸಹ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮಲಿಂಗರೆಡ್ಡಿ,  ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ. ನಾನು ಯಾವುದೇ ಖಾತೆಯ ನಿರೀಕ್ಷೆ ಮಾಡಿಲ್ಲ, ಬೇಡಿಕೆ ಕೂಡ ಇಡುವುದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.

ಆದಷ್ಟು ಬೇಗ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮಾಡುತ್ತೇವೆ. ಮಳೆ ಸಂದರ್ಭದಲ್ಲಿ ಜನರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿಸುತ್ತೇವೆ  ಎಂದು ರಾಮಲಿಂಗರೆಡ್ಡಿ ತಿಳಿಸಿದರು.

Key words: Ramalingareddy-minister-position- Oath