Thursday, August 27, 2026

BDA Apartments

Home Front Page ಡಿಸಿಎಂ ಸ್ಥಾನ ಕೈ ತಪ್ಪಿದ ವಿಚಾರ ಕುರಿತು ಡಾ.ಜಿ.ಪರಮೇಶ್ವರ್  ಪ್ರತಿಕ್ರಿಯೆ ಏನು..?

ಡಿಸಿಎಂ ಸ್ಥಾನ ಕೈ ತಪ್ಪಿದ ವಿಚಾರ ಕುರಿತು ಡಾ.ಜಿ.ಪರಮೇಶ್ವರ್  ಪ್ರತಿಕ್ರಿಯೆ ಏನು..?

ಬೆಂಗಳೂರು,ಮೇ,20,2023(www.justkannada.in): ಇಂದು ಸಿಎಂ ಮತ್ತು ಡಿಸಿಎಂ ಜೊತೆ  8 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಡಾ.ಜಿ.ಪರಮೇಶ್ವರ್ ಸಹ ಪದಗ್ರಹಣ ಮಾಡಲಿದ್ದಾರೆ. ಈ ನಡುವೆ ತಮಗೆ ಡಿಸಿಎಂ ಸ್ಥಾನ ಕೈತಪ್ಪಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು,  ನನಗೆ ಡಿಸಿಎಂ ಸ್ಥಾನ ನೀಡದಿದ್ದಕ್ಕೆ ಯಾವುದೇ ಬೇಸರವಿಲ್ಲ.  ಒಬ್ಬರಿಗೆ ,ಮಾತ್ರ ಡಿಸಿಎಂ ಸ್ಥಾನ ಎಂದು ಹೈಕಮಾಂಡ್ ಹೇಳಿದೆ. ಹೈಕಮಾಂಡ್ ನೀಡಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ. ಸಣ್ಣ ಪುಟ್ಟ ವ್ಯತ್ಯಾಸ ಬಿಟ್ಟು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲವೂ ಬಗೆಹರಿದಿದೆ ಎಂದರು.

ನನಗೂ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಎಐಸಿಸಿ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ​ಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರಿಗೂ ಕೂಡ ಇದು ಅತಿ ದೊಡ್ಡ ಸವಾಲು. ರಾಜ್ಯದ ಜನ ಬಹಳಷ್ಡು ನಿರೀಕ್ಷೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಜನರಿಗೆ ತಿಳಿಸಿದ್ದೇವೆ. ಐದೂ ಗ್ಯಾರಂಟಿ ಜಾರಿ ಮಾಡುವುದು ಬಹಳ ಪ್ರಾಮುಖ್ಯ. ಈಗ ಸದ್ಯದ ಸ್ಥಿತಿಯಲ್ಲಿ ಮೊದಲ ಕ್ಯಾಬಿನೆಟ್ ನಲ್ಲಿ ಐದೂ ಗ್ಯಾರಂಟಿ ಗಳನ್ನು ಅಪ್ರೂವ್ ಮಾಡ್ತೇವೆ ಅಂತ ಹೇಳಿದ್ದವು.  ಅದನ್ನು ಇಂದೇ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.

Key words: Dr. G. Parameshwar- response -issue – DCM-position – lost