Saturday, August 1, 2026

BDA Apartments

Home Front Page ವಿಜಯಪುರದಲ್ಲಿ ಮತಚಲಾಯಿಸಿ ಗಮನ ಸೆಳೆದ 95 ವರ್ಷದ ಬಸನಿಂಗವ್ವ!

ವಿಜಯಪುರದಲ್ಲಿ ಮತಚಲಾಯಿಸಿ ಗಮನ ಸೆಳೆದ 95 ವರ್ಷದ ಬಸನಿಂಗವ್ವ!

ಬೆಂಗಳೂರು, ಮೇ 10, 2023 (www.justkannada.in): ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ನಾಗಠಾಣ ಮತಗಟ್ಟೆಯಲ್ಲಿ 95 ವರ್ಷ ವೃದ್ದೆ ಮತ ಚಲಾಯಿಸಿ ಗಮನ ಸೆಳೆದರು.

ನಾಗಠಾಣ ಮತಕ್ಷೇತ್ರದ ಬಸನಿಂಗವ್ವ ಬಿರಾದಾರ ಮತ ಚಲಾಯಿಸಿದರು. ವೋಟು ಹಾಕಿ ನಂತರ ಮತಗಟ್ಟೆಯಿಂದ ಹೊರಬಂದ ವೇಳೆ ಎಲ್ಲರ ಗಮನ ಬಸನಿಂಗವ್ವ ಬಿರಾದಾರ ಅವರ ಕಡೆ ಹೋಯಿತು.

ಹೈವೋಲ್ಟೇಜ್ ಕ್ಷೇತ್ರವಾಗಿರುವ ವರುಣ, ಚಾಮರಾಜನಗರ ಅಭ್ಯರ್ಥಿ ಸಚಿವ, ವಿ ಸೋಮಣ್ಣ ಮತದಾನ ಮಾಡಿದರು.  ವಿ ಸೋಮಣ್ಣ ಹಾಗೂ ಪತ್ನಿ ಚಾಮರಾಜನಗರದ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದರು.

ಮಳೆ ಬರುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಆದಷ್ಟು ಬೇಗ ಬಂದು ಓಟ್ ಮಾಡಿ ಎಂದು ಕಂದಾಯ ಸಚಿವ ಆರ್. ಆಶೋಕ್ ಮನವಿ ಮಾಡಿದರು. ಇನ್ನು ಮತದಾನ ಮಾಡಿ ಮಾತನಾಡಿದ ನಟ ರಮೇಶ್ ಅರವಿಂದ್, ಮತದಾರರ ಉತ್ಸಾಹ ನೋಡಿ ಸಂತೋಷ ಆಗುತ್ತಿದೆ ಎಂದು ಹೇಳಿದರು.