Thursday, July 30, 2026

BDA Apartments

Home Front Page ಕಾಂಗ್ರೆಸ್ ವಿರುದ್ಧ ಮುಂದುವರೆದ ವಾಗ್ದಾಳಿ: ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಸಿಎಂ ಬಿಎಸ್ ವೈ.

ಕಾಂಗ್ರೆಸ್ ವಿರುದ್ಧ ಮುಂದುವರೆದ ವಾಗ್ದಾಳಿ: ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಸಿಎಂ ಬಿಎಸ್ ವೈ.

ಬೆಂಗಳೂರು,ಮೇ,8,2023(www.justkannada.in): ಕಾಂಗ್ರೆಸ್​ ಪಕ್ಷ ದೇಶದಲ್ಲಿ ಮುಳಗುವ ಹಡಗು. ರಾಜ್ಯದಲ್ಲಿ ಈ ಬಾರಿ ಬಿಜೆಪಿ 130ರಿಂದ 135 ಸ್ಥಾನ ಗೆಲ್ಲುವ ಮೂಲಕ ಸ್ವಂತಬಲದಿಂದ ಸರ್ಕಾರ ರಚಿಸುವುದು ನಿಶ್ಚಿತ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ನಾವು  ಎಸ್ ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಇತಿಹಾಸ ಸೃಷ್ಠಿಸಿದ್ದೇವೆ.  ರಾಜ್ಯದಲ್ಲಿ ಮೋದಿ ಅಮಿತ್ ಶಾ ರೋಡ್ ಶೋ ಮಾಡಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಬಿಜೆಪಿ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ. ರಾಜ್ಯದಲ್ಲಿ ಮೋದಿ ನೇತೃತ್ವದಲ್ಲಿ ಅಭಿವೃದ್ದಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ನಂಬರ್ ಒನ್ ಆಗುತ್ತೆ.   ನಾವು ಎಂದಿಗೂ ಜಾತಿ ರಾಜಕಾರಣ ಮಾಡಿಯೇ ಇಲ್ಲ ಎಂದರು.

ಕಾಂಗ್ರೆಸ್​ ಪಕ್ಷ ದೇಶದಲ್ಲಿ ಮುಳಗುವ ಹಡಗು. ಪ್ರಧಾನಿ ಮೋದಿಯವರ ಎದರು ರಾಹುಲ್​ ಗಾಂಧಿ ಸರಿಸಮಾನ ಆಗಲು ಸಾಧ್ಯವಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಒಂದು ಭ್ರಷ್ಟಾಚಾರದ ಆರೋಪವಿಲ್ಲ.  ವೀರಶೈವ ಲಿಂಗಾಯತವನ್ನು ಸಮಾಜವನ್ನು ಎತ್ತುಕಟ್ಟುವ ಕೆಲಸ ಕಾಂಗ್ರೆಸ್​ ಮಾಡುತ್ತಿದೆ. ಕಾಂಗ್ರೆಸ್​ ಓಲೈಕೆ ರಾಜಕಾರಣ ಮಾಡುತ್ತಿದೆ. ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಪ್ರಯತ್ನ ಪಟ್ಟವರು ಇಂದು ಲಿಂಗಾಯತ ಸಮಾಜದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ವೀರಶೈವ ಲಿಂಗಾಯತ ಸಮಾಜ ನಮ್ಮ ಜೊತೆ ಇದೆ  ಎಂದು ಬಿಎಸ್ ವೈ ಹೇಳಿದರು.

ರೈತರು, ಮಹಿಳೆರು, ಅಭಿವೃದ್ಧಿಗೆ ಮುಂದಿನ ಪೀಳಿಗೆಗೆ ನಮ್ಮ ಸರ್ಕಾರ ಬೇಕಾಗಿದೆ. ಮನೆ ಮನೆಗೆ ನೀರು, ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಪ್ರಧಾನಿ ಮೋದಿಯವರು ಕೊರೋನ ಸಂದರ್ಭದಲ್ಲಿ ನಮ್ಮ ದೇಶ ಕಾಪಾಡಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವ ದೇಶಗಳಲ್ಲಿ 5 ನೇ ಸ್ಥಾನಕ್ಕೆ ಬಂದಿದ್ದೇವೆ. ಪ್ರಧಾನಿ ಮೋದಿ, ಅಮಿತ್ ಷಾ ಕರ್ನಾಟಕದ ಬೆಂಬಲ ಕೇಳಿದ್ದಾರೆ ಎಂದು ಬಿಎಸ್ ವೈ ನುಡಿದರು.

Key words:  Former CM -B.S.Yeddyurappa- expressed – confidence – BJP- victory.