Thursday, August 20, 2026

BDA Apartments

Home Front Page ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ವಿಶ್ವ ಹಿಂದೂ ಪರಿಷದ್’ನಿಂದ ನೋಟಿಸ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ವಿಶ್ವ ಹಿಂದೂ ಪರಿಷದ್’ನಿಂದ ನೋಟಿಸ್

ಬೆಂಗಳೂರು, ಮೇ 07, 2023 (www.justkannada.in): ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಶ್ವ ಹಿಂದೂ ಪರಿಷದ್ ಕಾನೂನು ನೋಟಿಸ್ ನೀಡಿದೆ.

ಬಜರಂಗ ದಳದ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷದ್ ನೋಟಿಸ್ ನೀಡಿ 100 ಕೋಟಿ ರೂ.ಗೂ ಅಧಿಕ ಪರಿಹಾರ ನೀಡುವಂತೆ ಒತ್ತಾಯಿಸಿದೆ.

ವಿಶ್ವ ಹಿಂದೂ ಪರಿಷದ್‌ನ ಚಂಡೀಗಢ ಘಟಕ ಮತ್ತು ಅದರ ಯುವ ವಿಭಾಗ ಬಜರಂಗ ದಳ ಮೇ 4ರಂದು ನೋಟಿಸ್ ನೀಡಿವೆ. 14 ದಿನಗಳೊಳಗೆ ಪರಿಹಾರ ನೀಡುವಂತೆ ಒತ್ತಾಯಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ಕೋರಿ ಸಲ್ಲಿಸಲಾಗಿರುವ ಪ್ರಶ್ನೆಗಳಿಗೆ ಕಾಂಗ್ರೆಸ್ ಪಕ್ಷ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.