ಚುನಾವಣಾಯಲ್ಲಿ ಕೈ ಪಕ್ಷಕ್ಕೆ ಭರ್ಜರಿ ಲಾಭ: ಲೋಕ್’ಪೋಲ್ ಸಮೀಕ್ಷೆ ವರದಿ

ಬೆಂಗಳೂರು, ಮೇ 07, 2023 (www.justkannada.in): ಕರ್ನಾಟಕದಲ್ಲಿ ಆಡಳಿತರೂಢ ಬಿಜೆಪಿಗೆ ಮುಖಭಂಗವಾಗಲಿದೆ ಎಂದು ಲೋಕ್’ಪೋಲ್ ಸಮೀಕ್ಷೆ ವರದಿ ಹೇಳಿದೆ.

ರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮೇ 10ರ ಬುಧವಾರ ನಡೆಯಲಿದೆ. ಮತದಾನಕ್ಕೆ 4 ದಿನಗಳ ಮೊದಲು ಸಮೀಕ್ಷೆ ನಡೆಸಿ ಈ ವರದಿ ನೀಡಲಾಗಿದೆ.

ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಅಗತ್ಯವಿರುವ ಮ್ಯಾಜಿಕ್‌ ನಂಬರ್ 113. ಚುನಾವಣೆಗೆ 4 ದಿನಗಳು ಇರುವಾಗ ಪ್ರಕಟಗೊಂಡ ಸಮೀಕ್ಷೆ ಫಲಿತಾಂಶ ಆಡಳಿತ ಪಕ್ಷಕ್ಕೆ ನಿರಾಸೆ ಕಾದಿರುವ ಸೂಚನೆ ನೀಡಿದೆ.

ಬಿಜೆಪಿ 59-65 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಕಾಂಗ್ರೆಸ್ 129 ರಿಂದ 134 ಸ್ಥಾನಗಳಲ್ಲಿ ಜಯಗಳಿಸಲಿದೆ. ಜೆಡಿಎಸ್ ಪಕ್ಷ 23 ರಿಂದ 28 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.