Tuesday, October 27, 2026

Dasara Wishes

Happy Dasara
Home Crime ಬೆಂಗಳೂರು, ಮೈಸೂರಿನಲ್ಲಿ ಐಟಿ ದಾಳಿ : ಕೋಟ್ಯಾಂತರ ರೂ. ನಗದು ಚಿನ್ನಾಭರಣ ವಶಕ್ಕೆ.

ಬೆಂಗಳೂರು, ಮೈಸೂರಿನಲ್ಲಿ ಐಟಿ ದಾಳಿ : ಕೋಟ್ಯಾಂತರ ರೂ. ನಗದು ಚಿನ್ನಾಭರಣ ವಶಕ್ಕೆ.

ಬೆಂಗಳೂರು,ಮೇ,6,2023(www.justkannada.in): ಬೆಂಗಳೂರು ಹಾಗೂ ಮೈಸೂರು ನಗರದ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಫಂಡಿಂಗ್ ಮಾಡುತ್ತಿದ್ದ ಆರೋಪದ ಮೇಲೆ ನಿನ್ನೆ  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕಕಾಲದಲ್ಲಿ ಹಲವೆಡೆ ದಾಳಿ ನಡೆಸಿದ್ದರು.ಬೆಂಗಳೂರು, ಮೈಸೂರಿನಲ್ಲಿ ಐಟಿ ದಾಳಿ : ಕೋಟ್ಯಾಂತರ ರೂ. ನಗದು ಚಿನ್ನಾಭರಣ ವಶಕ್ಕ...

ಬೆಂಗಳೂರಿನ  ಶಾಂತಿನಗರ ಕಾಕ್ಸಟೌನ್ ಶಿವಾಜಿನಗರ, ಸದಾಶಿವನಗರ, ಕುಮಾರ ಪಾರ್ಕ್  ವೆಸ್ಟ್ ಸೇರಿ  ಹಲವು ಕಡೆಗಳಲ್ಲಿ ಐಟಿ ದಾಳಿಯಾಗಿತ್ತು. ಈ ವೇಳೆ  20 ಕೋಟಿ ಹಣ ಸೀಜ್  ಮಾಡಲಾಗಿದೆ.  15ಕೋಟಿಗೂ ಹೆಚ್ಚು ನಗದು ಮತ್ತು 5 ಕೋಟಿ ಚಿನ್ನಾಭರಣವನ್ನ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Key words: IT -attack –Bangalore-Mysore