Monday, September 14, 2026

BDA Apartments

ಚೆಲುವರಾಯಸ್ವಾಮಿ ಸೋಲಿಗೆ ಕಣ್ಣೀರೇ ಕಾರಣ- ಹೆಚ್.ಡಿಕೆಗೆ ಮಾಜಿ ಸಿಎಂ ಸಿದ್ಧರಾ...
Home Front Page ಚೆಲುವರಾಯಸ್ವಾಮಿ ಸೋಲಿಗೆ ಕಣ್ಣೀರೇ ಕಾರಣ- ಹೆಚ್.ಡಿಕೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪರೋಕ್ಷ ಟಾಂಗ್.

ಚೆಲುವರಾಯಸ್ವಾಮಿ ಸೋಲಿಗೆ ಕಣ್ಣೀರೇ ಕಾರಣ- ಹೆಚ್.ಡಿಕೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪರೋಕ್ಷ ಟಾಂಗ್.

ಮಂಡ್ಯ,ಮೇ,3,2023(www.justkannada.in):  ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲದಲ್ಲಿ ಚೆಲುವರಾಯಸ್ವಾಮಿ ಸೋಲಿಗೆ ಕಣ್ಣೀರೇ ಕಾರಣ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ  ವಿಪಕ್ಷ ನಾಯಕ ಸಿದ್ಧರಾಮಯ್ಯ ಪರೋಕ್ಷ ಟಾಂಗ್ ನೀಡಿದರು.

ನಾಗಮಂಗಲದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿ ಪರ ಪ್ರಚಾರ ನಡೆಸಿ ಮಾತನಾಡಿದ ಸಿದ್ಧರಾಮಯ್ಯ, ಕೆಲವರಿಗೆ ಕಣ್ಣೀರು ಒಂದು ರಾಜಕೀಯ ದಾಳವಾಗಿದೆ. ಕೆಲವರು ಅಳುವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ  ನಾನು ಹಲವು ಬಾರಿ ಸೋತಿದ್ದೀನಿ, ಗೆದ್ದಿದ್ದೀನಿ. ಆದರೆ ನಾನು ಯಾವತ್ತೂ ಕಣ್ಣೀರು ಹಾಕಿಲ್ಲ ಎಂದರು.ಚೆಲುವರಾಯಸ್ವಾಮಿ ಸೋಲಿಗೆ ಕಣ್ಣೀರೇ ಕಾರಣ siddaramaiah siddaramaiah 2

ಜೆಡಿಎಸ್ 25 ಸೀಟು ಗೆಲ್ಲಬಹುದು ಅಷ್ಟೆ, ಜೆಡಿಎಸ್ ಗೆ ಯಾವುದೇ ತತ್ವ ಸಿದ್ದಾಂತ ಇಲ್ಲ , ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತಾ ಹೆಚ್.ಡಿಕೆಯನ್ನ ಸಿಎಂ ಮಾಡಿದ್ವಿ.  ಕುಮಾರಸ್ವಾಮಿಯನ್ನ ಶಾಸಕರು ಭೇಟಿ ಮಾಡಲು ಪರದಾಟ ನಡೆಸುತ್ತಿದ್ದರು.  ಅಂದು ನಾನು ಅಮೇರಿಕಾ ಹೋಗಬೇಡಿ ಎಂದೆ. ಆದರೆ ಕುಮಾರಸ್ವಾಮಿ 3 ದಿನದಲ್ಲಿ ಬರ್ತೀನಿ ಅಂತಾ ಹೇಳಿ 9 ದಿನ ಇದ್ದರು. ಬಳಿಕ ನನ್ನ ಮೇಲೆಯೇ ಕುಮಾರಸ್ವಾಮಿ ಗೂಬೆ ಕುರಿಸಿದರು. ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಕಾರಣ ಎಂದು ಸಿದ್ಧರಾಮಯ್ಯ ಆರೋಪಿಸಿದರು.

Key words: Tears – reason – Cheluvarayaswamy- defeat-Former CM -Siddaramaiah -tong – HDK