Saturday, August 22, 2026

BDA Apartments

Home Front Page ಸಮ್ಮಿಶ್ರ ಸರ್ಕಾರ ಬೀಳಲು ಶಕುನಿಗಳೇ ಕಾರಣ- ಮಾಜಿ ಸಂಸದ ವಿ.ಎಸ್ ಉಗ್ರಪ್ಪ….

ಸಮ್ಮಿಶ್ರ ಸರ್ಕಾರ ಬೀಳಲು ಶಕುನಿಗಳೇ ಕಾರಣ- ಮಾಜಿ ಸಂಸದ ವಿ.ಎಸ್ ಉಗ್ರಪ್ಪ….

ಬೆಂಗಳೂರು,ಆ,26,2019(www.justkannada.in):  ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ಬೀಳಲು ಬಿಜೆಪಿಯಲ್ಲಿನ ಶಕುನಿಗಳೇ ಕಾರಣ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.

ಈ ಕುರಿತು ಇಂದು ಮಾತನಾಡಿದ ವಿ.ಎಸ್ ಉಗ್ರಪ್ಪ, ಬಿಜೆಪಿಯಲ್ಲಿ ಸಾಕಷ್ಟು ಶಕುನಿಗಳಿದ್ದಾರೆ. ಅಮಿತ್ ಶಾ, ಸಂತೋಷ್, ಬಿಎಸ್ ಯಡಿಯೂರಪ್ಪ ಇದ್ದಾರೆ. ಇಂತಹ ಶಕುನಿಗಳಿಂದ ಸರ್ಕಾರ ಬಿದ್ದಿದೆ ಸಮ್ಮಿಶ್ರ ಸರ್ಕಾರ ಬೀಳಲು ಇವರೇ ಕಾರಣ ಎಂದು ಆರೋಪಿಸಿದರು.

ಹಾಗೆಯೇ ಕಾಂಗ್ರೆಸ್  ವಿರುದ್ದ ಜೆಡಿಎಸ್ ನಾಯಕರ ಟೀಕೆ ಕುರಿತು ಪ್ರತಿಕ್ರಿಯಿಸಿದ ವಿ,ಎಸ್ ಉಗ್ರಪ್ಪ,  ಜೆಡಿಎಸ್ ನವರದ್ದು ಅಧಿಕಾರದಲ್ಲಿದ್ದಾಗ ಒಂದು ನಿಲುವು. ಅಧಿಕಾರದಲ್ಲಿ ಇಲ್ಲದಿದ್ದಾಗ ಮತ್ತೊಂದು ನಿಲುವು.  ಅಧಿಕಾರ ಕಳೆದುಕೊಂಡ ಮೇಲೆ ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನ ಟೀಕಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: Shakuni-  responsible – collapse – coalition government – former MP VS Ugrappa.