Sunday, August 23, 2026

BDA Apartments

Home Front Page ಮುಕ್ತ ಮನಸ್ಸಿನಿಂದ ನೋಡಿದ್ರೆ ಬಿಜೆಪಿ ಸಾಧನೆಗಳು ಕಾಣುತ್ತೆ- ಕಾಂಗ್ರೆಸ್ ನಾಯಕರಿಗೆ ಶಾಸಕ ಸಿಟಿ ರವಿ ಟಾಂಗ್.

ಮುಕ್ತ ಮನಸ್ಸಿನಿಂದ ನೋಡಿದ್ರೆ ಬಿಜೆಪಿ ಸಾಧನೆಗಳು ಕಾಣುತ್ತೆ- ಕಾಂಗ್ರೆಸ್ ನಾಯಕರಿಗೆ ಶಾಸಕ ಸಿಟಿ ರವಿ ಟಾಂಗ್.

ಚಿಕ್ಕಮಗಳೂರು,ಮೇ,2,2023(www.justkannada.in): ಡಬಲ್ ಇಂಜಿನ್ ಸರ್ಕಾರದ ಕೊಡುಗೆ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಕಾಂಗ್ರೆಸ್ಸಿಗರು ಮುಕ್ತ ಮನಸ್ಸಿನಿಂದ ನೋಡಿದರೇ ಬಿಜೆಪಿಯ ಸಾಧನೆಗಳು ಕಾಣುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿಟಿ ರವಿ, ಪ್ರಧಾನಿ ನರೇಂದ್ರ ಮೋದಿಯವ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ  ದೇಶದ ಜನರಿಗಾಗಿ ಇಡೀ ಬದುಕನ್ನು ಮೀಸಲಿಟ್ಟಿದ್ದಾರೆ. ರಾಜ್ಯದ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡಿದೆ. ರಷ್ಯಾ-ಉಕ್ರೇನ್ ಯುದ್ಧ ವೇಳೆ ವಿದ್ಯಾರ್ಥಿಗಳನ್ನು ದೇಶಕ್ಕೆ  ಕರೆತರಲಾಯಿತು. ನಂಬಿಕೆಯ ಆಧಾರದಲ್ಲಿ ಮೋದಿ ಬಂದಾಗ ಜನರು ಸೇರುತ್ತಾರೆ. ಕಾಂಗ್ರೆಸ್ಸಿಗರು ಹತಾಶೆಯಿಂದ ಪ್ರಧಾನಿ ಮೋದಿ  ಅವರನ್ನ ಟೀಕಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಧಾನಿ ಮೋದಿ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಆಕ್ಷೇಪಾರ್ಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಪ್ರಿಯಾಂಕ್  ಅವರು ತಂದೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದ ಮೇಲೆ ಸರ್ವೆ ವರದಿ ಗಮನಿಸಿದ್ದೇನೆ. ಕರ್ನಾಟಕದಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ಕ್ರಾಸ್ ಮಾಡುತ್ತೆ ಎಂದರು.

Key words: open mind-see –BJP- achievements – MLA -CT Ravi- Tong – Congress leaders.