Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕಾಂಗ್ರೆಸ್ ನ ಗ್ಯಾರಂಟಿ ಅಂದ್ರೆ ಭ್ರಷ್ಟಾಚಾರ: ಡಬಲ್ ಇಂಜನ್ ಸರ್ಕಾರದಿಂದ ಮಾತ್ರ ಬದಲಾವಣೆ ಸಾಧ್ಯ- ಪ್ರಧಾನಿ...

ಕಾಂಗ್ರೆಸ್ ನ ಗ್ಯಾರಂಟಿ ಅಂದ್ರೆ ಭ್ರಷ್ಟಾಚಾರ: ಡಬಲ್ ಇಂಜನ್ ಸರ್ಕಾರದಿಂದ ಮಾತ್ರ ಬದಲಾವಣೆ ಸಾಧ್ಯ- ಪ್ರಧಾನಿ ಮೋದಿ.

ನವದೆಹಲಿ,ಏಪ್ರಿಲ್,27,2023(www.justkannada.in): ದೇಶದ ಅಭಿವೃದ್ದಿಗಾಗಿ ಬಿಜೆಪಿ ಸದಾ ಶ್ರಮಿಸುತ್ತಿದೆ.  ಡಬಲ್ ಇಂಜನ್ ಸರ್ಕಾರ ಇರುವ ಕಡೆ ಅಭಿವೃದ್ದಿಯಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಇಂದು ಬಿಜೆಪಿ ಕಾರ್ಯಕರ್ತರ ಜೊತೆ ಸಂವಾದ ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ಕರ್ನಾಟಕದ ಜನರನ್ನ ದಶಕದಿಂದಲೂ ನಾನು ನೋಡುತ್ತಿದ್ದೇನೆ.  ರಾಜಕೀಯಕ್ಕೆ ಬರುವ ಮೊದಲು ಹಲವು ಬಾರಿ ಕರ್ನಾಟಕಕ್ಕೆ ಬಂದಿದ್ದೇನೆ. ಕರ್ನಾಟಕ ಎಲ್ಲದರಲ್ಲೂ ಸದೃಢವಾಗಿದೆ. ಕರ್ನಾಟಕ ಸಾಹಿತ್ಯಕ್ಕೆ ಹೆಸರುವಾಸಿಯಾಗಿದೆ.  ಕರ್ನಾಟಕದ ಆಧ್ಯಾತ್ಮಿಕತೆಗೆ ಯಾರೂ ಸಾಟಿ ಇಲ್ಲ.  ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಬದಲಾವಣೆ ಸಾಧ್ಯ. ಬಿಜೆಪಿ ಮುಂದೆ ನೂರಾರು ಸವಾಲುಗಳಿವೆ. ಈ ಬಾರಿಯೂ ಸ್ಪಷ್ಟ ಬಹುಮತವನ್ನ ನೀಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ.  ಕಾಂಗ್ರೆಸ್ ಅಂದರೇ ಕುಟುಂಬವಾದ. ಕಾಂಗ್ರೆಸ್ ನವರು ಗ್ಯಾರಂಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ನವರದ್ದು ಸುಳ್ಳಿನ ಗ್ಯಾರಂಟಿ. ಕಾಂಗ್ರೆಸ್ ನ ಗ್ಯಾರಂಟಿ ಅಂದ್ರೆ ಭ್ರಷ್ಟಾಚಾರ. ಭ್ರಷ್ಟಾಚಾರಕ್ಕಾಗಿ ಗ್ಯಾರಂಟಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ನ ಗ್ಯಾರಂಟಿ ಅಂದ್ರೆ ಭ್ರಷ್ಟಾಚಾರ: ಡಬಲ್ ಇಂಜನ್ ಸರ್ಕಾರದಿಂದ ಮಾತ...

ಆವಾಸ್ ಯೋಜನೆಯಡಿ ಮನೆಗಳನ್ನ ನಿರ್ಮಾಣ  ಮಾಡಿದ್ದೇವೆ. 2014ರ ಹಿಂದೆ 1ಮನೆ ನಿರ್ಮಿಸಲು 300 ದಿನ ತೆಗೆದುಕೊಳ್ಳುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 100 ದಿನಗಳಲ್ಲಿ ಮನೆ ನಿರ್ಮಾಣವಾಗುತ್ತಿದೆ. ಕಾಂಗ್ರೆಸ್ 70 ವರ್ಷಗಳಲ್ಲಿ ಕೇವಲ 7 ಏಮ್ಸ್ ಗಳನ್ನ ನಿರ್ಮಿಸಿದೆ . ಕೇವಲ 7 ವರ್ಷಗಳಲ್ಲಿ 3 ಪಟ್ಟು ಹೆಚ್ಚು ಏಮ್ಸ್ ಆಸ್ಪತ್ರೆಗಳನ್ನ ಕರ್ನಾಟಕದಲ್ಲಿ ನಿರ್ಮಿಸಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಲಾಭ ಆಗಿದೆ. ಡಬಲ್ ಇಂಜಿನ್ ಸರ್ಕಾರ ಇರುವ ರಾಜ್ಯಗಳಲ್ಲಿ ಅಭಿವೃದ್ದಿಯಾಗಿದೆ. ಬಡವರಿಗಾಗಿ ಹಲವಾರು ಯೋಜನೆಗಳನ್ನ ತಂದಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪನ್ನ ಎಲ್ಲರೂ ಗೌರವಿಸಬೇಕು ಎಂದು ಮೋದಿ ತಿಳಿಸಿದರು.

ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು.  ಕರ್ನಾಟಕದ ಯುವ ಪೀಳಿಗೆಯ ಬಗ್ಗೆ ಯೋಚನೆ ಮಾಡಬೇಕಾಗಿದೆ. ಅದಕ್ಕಾಗಿಯೇ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಬಿಜೆಪಿಗೆ ಯಾವುದೇ ಶಾರ್ಟ್ ಕಟ್ ಇಲ್ಲ ಎಂದರು.

Key words:  Corruption – Congress- guarantee- double engine- government – PM Modi.