Sunday, September 20, 2026

BDA Apartments

ಕರ್ನಾಟಕ ರಾಜ್ಯದಲ್ಲಿ ನನ್ನ ಕಣ್ಣ ಮುಂದೆಯೇ ಬಿಜೆಪಿ ಹಾಳಾಗುತ್ತೆ- ಮಾಜಿ ಸಿಎಂ...
Home Front Page ಕರ್ನಾಟಕ ರಾಜ್ಯದಲ್ಲಿ ನನ್ನ ಕಣ್ಣ ಮುಂದೆಯೇ ಬಿಜೆಪಿ ಹಾಳಾಗುತ್ತೆ- ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಕರ್ನಾಟಕ ರಾಜ್ಯದಲ್ಲಿ ನನ್ನ ಕಣ್ಣ ಮುಂದೆಯೇ ಬಿಜೆಪಿ ಹಾಳಾಗುತ್ತೆ- ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಹುಬ್ಬಳ್ಳಿ,ಏಪ್ರಿಲ್,18,2023(www.justkannada.in):  ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್  ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ಮುಂದುವರೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ಕರ್ನಾಟಕ ರಾಜ್ಯದಲ್ಲಿ ನನ್ನ ಕಣ್ಣ ಮುಂದೆಯೇ ಬಿಜೆಪಿ ಹಾಳಾಗುತ್ತೆ. ಬಿಜೆಪಿಯವರು ಯಾಕೆ ಗ್ರೌಂಡ್ ರಿಪೋರ್ಟ್ ಕೊಡಲಿಲ್ಲ. ಅರುಣ್ ಸಿಂಗ್. ಧರ್ಮೇಂದ್ರ ಪ್ರಧಾನ್ ನನ್ನ ಕರೆದು ಮಾತನಾಡಿಲ್ಲ. ರಾಜ್ಯದಲ್ಲಿ  ಬಿಜೆಪಿ ಕೆಲವರ ಕಪಿಮುಷ್ಟಿಯಲ್ಲಿ ಇದೆ.  ಕೆ. ಅಣ್ಣಾಮಲೈಗೆ ರಾಜ್ಯದ  ಒಂದು ಕ್ಷೇತ್ರದ ಬಗ್ಗೆಯೂ ಮಾಹಿತಿ ಇಲ್ಲ ಒಂದು ಚುನಾವಣೆ ಗೆಲ್ಲದಿರುವವರು ಚುನಾವಣಾ ಸಹ ಉಸ್ತುವಾರಿ.  ನಮ್ಮ ಕೈ  ಕೆಳಗೆ ಕೆಲಸ ಮಾಡಿದ ಅಧಿಕಾರಿ ಹಿಂದೆ ನಾವು ಕೂರಬೇಕು ಎಂದು ಕಿಡಿಕಾರಿದರು. ಕರ್ನಾಟಕ ರಾಜ್ಯದಲ್ಲಿ ನನ್ನ ಕಣ್ಣ ಮುಂದೆಯೇ ಬಿಜೆಪಿ ಹಾಳಾಗುತ್ತೆ jagadish shettar-hubli jag...

ಬಿಜೆಪಿ ರಾಜ್ಯಾಧ್ಯಕ್ಷರನ್ನ ಬದಲಿಸಿಲ್ಲ. ಕೋರ್ ಕಮಿಟಿಯಲ್ಲಿ ನಳೀನ್ ಕುಮಾರ್ ಕಟೀಲು ಹೆಸರು ಸೇರಿಸಿದ್ದೇ ಸಂತೋಷ್.   ನಳೀನ್ ಕುಮಾರ್ ಬಿಎಲ್ ಸಂತೋಷ್ ಹೇಳಿದಂತೆ ಕಟೀಲ್ ಕೇಳುತ್ತಾರೆ. ಕಟೀಲ್ ಕೆಲ ದಿನಗಳ ಹಿಂದೆ ಮಾತಾಡಿದ್ದ ಆಡಿಯೋ ವೈರಲ್ ಆಗಿತ್ತು ಬಿಎಸ್ ವೈ ಕಾಲ ಮುಗಿತು. ಶೆಟ್ಟರ್. ಈಶ್ವರಪ್ಪ ಮುಗಿಸ್ತೀವಿ ಎಂದಿದ್ದರು ಎಂದರು.

Key words:  BJP – ruined- in front -my eyes -Karnataka -state- Former CM -Jagdish Shettar.