Tuesday, August 4, 2026

BDA Apartments

Home Front Page ಹೊಳೆನರಸೀಪುರ ಕ್ಷೇತ್ರದಿಂದ ಎಚ್.ಡಿ.ರೇವಣ್ಣ ವಿರುದ್ಧ ಮತ್ತೊಬ್ಬ ಎಚ್.ಡಿ.ರೇವಣ್ಣ ನಾಮಪತ್ರ!

ಹೊಳೆನರಸೀಪುರ ಕ್ಷೇತ್ರದಿಂದ ಎಚ್.ಡಿ.ರೇವಣ್ಣ ವಿರುದ್ಧ ಮತ್ತೊಬ್ಬ ಎಚ್.ಡಿ.ರೇವಣ್ಣ ನಾಮಪತ್ರ!

ಹಾಸನ, ಏಪ್ರಿಲ್ 16, 2023 (www.justkannada.in): ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಅದೇ ಹೆಸರಿನ ಮತ್ತೊಬ್ಬರು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಹೌದು, ಹೊಳೆನರಸೀಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ  ಚನ್ನರಾಯಪಟ್ಟಣ ತಾಲೂಕಿನ ನಿವಾಸಿ ಎಚ್.ಡಿ. ರೇವಣ್ಣ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.

ಎಚ್.ಡಿ ರೇವಣ್ಣ ಬಿನ್ ದೊಡ್ಡೇಗೌಡ ಹೊಳೆನರಸೀಪುರ ಪಟ್ಟಣದ ತಾಲೂಕು ಕಚೇರಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಹೊಳೆನರಸೀಪುರ ಕ್ಷೇತ್ರದ ಚನ್ನರಾಯಪಟ್ಟಣ ತಾಲೂಕು ವ್ಯಾಪ್ತಿಗೆ ಒಳಪಡುವ ದಂಡಿಗನಹಳ್ಳಿ ಹೋಬಳಿಯ ಸಾಗತವಳ್ಳಿ ಅಂಚೆ, ಕೋಡಿಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.