Tuesday, August 4, 2026

BDA Apartments

Home Front Page ನನ್ನನ್ನು ಬರಿಗೈಯಲ್ಲಿ ಕಳುಹಿಸದರೆ ನಿಮಗೇ ಲಾಸ್: ಚಾಮರಾಜನಗರ ಚುನಾವಣಾ ಪ್ರಚಾರದಲ್ಲಿ ವಿ.ಸೋಮಣ್ಣ

ನನ್ನನ್ನು ಬರಿಗೈಯಲ್ಲಿ ಕಳುಹಿಸದರೆ ನಿಮಗೇ ಲಾಸ್: ಚಾಮರಾಜನಗರ ಚುನಾವಣಾ ಪ್ರಚಾರದಲ್ಲಿ ವಿ.ಸೋಮಣ್ಣ

ಚಾಮರಾಜನಗರ, ಏಪ್ರಿಲ್ 16, 2023 (www.justkannada.in): ವರುಣಾ ಬಳಿಕ ಚಾಮರಾಜನಗರದಲ್ಲಿ ಬಿಬಿಜೆ ಅಭ್ಯರ್ಥಿ ವಿ.ಸೋಮಣ್ಣ ಪ್ರಚಾರ ಆರಂಭಿಸಿದ್ದಾರೆ.

ಚಾಮರಾಜನಗರ ತಾಲೂಕಿನ‌ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳಲ್ಲಿ ವಿ.ಸೋಮಣ್ಣ ಬಹಿರಂಗ ಸಭೆಗಳನ್ನು ನಡೆಸಿದ್ದಾರೆ.

ಈ ವೇಳೆ ಮಾತನಾಡಿರುವ ಅವರು, ನಾನು ಕೇಳಿಕೊಂಡು ಚಾಮರಾಜನಗರಕ್ಕೆ ಬರಲಿಲ್ಲ. ಮನೆಯಲ್ಲಿ ಮಲಗಿದ್ದರೂ 20 ಸಾವಿರ ಮತಗಳ ಅಂತರದಿಂದ ಗೋವಿಂದರಾಜನಗರದಲ್ಲಿ ಗೆಲ್ಲುತ್ತಿದ್ದೆ ಎಂದಿದ್ದಾರೆ.

ವರಿಷ್ಠರು ದೂರದೃಷ್ಟಿ ಇಟ್ಟುಕೊಂಡು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ, ಕಳುಹಿಸಿದರೇ ನಿಮಗೇ ಲಾಸ್ ಎಂದು ಕ್ಷೇತ್ರದ ಮತದಾರರಿಗೆ ತಿಳಿಸಿದ್ದಾರೆ.