Sunday, August 23, 2026

BDA Apartments

Home Front Page ಜೆಡಿಎಸ್ 2ನೇ ಪಟ್ಟಿ ಬಿಡುಗಡೆ: ಹಾಸನ ಕ್ಷೇತ್ರದಿಂದ ಸ್ವರೂಪ್ ಗೆ ಟಿಕೆಟ್ ಘೋಷಣೆ.

ಜೆಡಿಎಸ್ 2ನೇ ಪಟ್ಟಿ ಬಿಡುಗಡೆ: ಹಾಸನ ಕ್ಷೇತ್ರದಿಂದ ಸ್ವರೂಪ್ ಗೆ ಟಿಕೆಟ್ ಘೋಷಣೆ.

ಬೆಂಗಳೂರು,ಏಪ್ರಿಲ್,14,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಭಾರಿ ಕಗ್ಗಂಟಾಗಿದ್ದ ಹಾಸನ ಜೆಡಿಎಸ್ ಟಿಕೆಟ್ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕೊನೆಗೂ ಸ್ವರೂಪ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಈ ಮೂಲಕ ಭವಾನಿ ರೇವಣ್ಣಅವರಿಗೆ ಟಿಕೆಟ್ ಕೈತಪ್ಪಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ನ 2ನೇ ಪಟ್ಟಿ ಬಿಡುಗಡೆ ಮಾಡಿದರು. 2ನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರದಿಂದ ಸ್ವರೂಪ್ ಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.

ಇನ್ನು  ಕುಡುಚಿ ಕ್ಷೇತ್ರದಿಂದ ಆನಂದ್ ಮಾಳಗಿ, ರಾಯಭಾಗಕ್ಷೇತ್ರದಲ್ಲಿ ಪ್ರದೀಪ್ ಮಾಳಗಿ ಅಥಣಿ ಶಶಿಕಾಂತ ಪಡಸಲಗಿ,. ಜೇವರ್ಗಿ ದೊಡ್ಡಪ್ಪಗೌಡ ಪಾಟೀಲ್ ಗೆ ಟಿಕೆಟ್ ನೀಡಲಾಗಿದೆ.

Key words: JDS -2nd list –release- Ticket -announcement – Swaroop -Hassan constituency.