Sunday, September 20, 2026

BDA Apartments

ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವು BDA JK_Adv BDA Adv
Home Crime ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವು.

ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವು.

ಬೆಳಗಾವಿ,ಏಪ್ರಿಲ್,14,2023(www.justkannada.in): ಘಟಪ್ರಭಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಘಟಪ್ರಭಾ ಪಟ್ಟಣದ ಧೂಪದಾಳ ಬಳಿ ಈ ಘಟನೆ ನಡೆದಿದೆ. ಸಂತೋಷ್ ಬಾಬು, ಅಜಯ್ ಬಾಬು, ಕೃಷ್ಣಬಾಬು, ಆನಂದ್ ಕೋಕರೆ ಮೃತಪಟ್ಟವರು. ಮೃತಪಟ್ಟವರು ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಮೂಲದವರಾಗಿದ್ದು, ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವು water death water

ಇನ್ನು ಘಟಪ್ರಭಾ ನದಿಗೆ ಈಜಲು ಆರು ಮಂದಿ ತೆರಳಿದ್ದರು. ಈ ಪೈಕಿ ನಾಲ್ಕು ಮಂದಿ ನೀರುಪಾಲಾಗಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Four youths- swimming – river –death-belagavi