Saturday, August 22, 2026

BDA Apartments

Home Front Page ಯಾರೋ ನಾಲ್ಕು ಜನ ಬಿಟ್ಟೋದ್ರೆ ಏನು ಆಗಲ್ಲ: ದುಡುಕಿನ ನಿರ್ಧಾರ ತೆಗೆದುಕೊಂಡವರಿಗೆ ಪಕ್ಷದ ಬಾಗಿಲು ಶಾಶ್ವತ...

ಯಾರೋ ನಾಲ್ಕು ಜನ ಬಿಟ್ಟೋದ್ರೆ ಏನು ಆಗಲ್ಲ: ದುಡುಕಿನ ನಿರ್ಧಾರ ತೆಗೆದುಕೊಂಡವರಿಗೆ ಪಕ್ಷದ ಬಾಗಿಲು ಶಾಶ್ವತ ಬಂದ್- ಅರುಣ್ ಸಿಂಗ್.

ಬೆಂಗಳೂರು,ಏಪ್ರಿಲ್,14,2023(www.justkannada.in): ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೆ ಟಿಕೆಟ್ ವಂಚಿತ ಹಲವು ಮುಖಂಡರು ಬಿಜೆಪಿ ತೊರೆಯುತ್ತಿದ್ದು , ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಈಗಾಗಲೇ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್,  ಯಾರೋ ನಾಲ್ಕು ಜನ ಬಿಟ್ಟೋದ್ರೆ ಏನು ಆಗಲ್ಲ. ದುಡುಕಿನ ನಿರ್ಧಾರ ತೆಗೆದುಕೊಂಡು ಹೋಗಿದ್ದಾರೆ.   ಅಂತವರಿಗೆ ಶಾಶ್ವತವಾಗಿ ಪಕ್ಷದ ಬಾಗಿಲು ಬಂದ್ ಆಗಿರುತ್ತದೆ. ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಯಾವ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.

ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ್ ಸವದಿ ಅವರನ್ನ  ಡಿಸಿಎಂ ಮಾಡಲಾಗಿತ್ತು.  ಜಗಳ ಇರುವ ಪಾರ್ಟಿ ಕಡೆ ಹೋಗಿದ್ದಾರೆ.  ಸವದಿ ನಿರ್ಧಾರ ಸ್ವಾರ್ಥದಿಂದ ಕೂಡಿದೆ.  ಲಕ್ಷ್ಮಣ್ ಸವದಿ 10 ವರ್ಷವಾದ್ರೂ ರಾಹುಲ್ ಮುಖ ನೋಡ್ತಾರೋ ಇಲ್ಲವೋ. ಗೊತ್ತಿಲ್ಲ. ಭೇಟಿ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಟೀಕಿಸಿದರು.

Key words: Lakshman savadi-leave-bjp-join-congress- Arun Singh-tong