Friday, September 18, 2026

BDA Apartments

Home Front Page ಬಿಎಸ್ ವೈ ಆಪ್ತ ಎನ್.ಆರ್ ಸಂತೋಷ್ ಗೆ ಕೈ ತಪ್ಪಿದ ಟಿಕೆಟ್:  ಬಿಜೆಪಿ ಬಾವುಟಕ್ಕೆ ಬೆಂಕಿ...

ಬಿಎಸ್ ವೈ ಆಪ್ತ ಎನ್.ಆರ್ ಸಂತೋಷ್ ಗೆ ಕೈ ತಪ್ಪಿದ ಟಿಕೆಟ್:  ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ ಬೆಂಬಲಿಗರಿಂದ ಆಕ್ರೋಶ.

ಹಾಸನ,ಏಪ್ರಿಲ್,13,2023(www.justkannada.in):  ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ ಎನ್​​ಆರ್ ಸಂತೋಷ್ ​ಗೆ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಈ ಹಿನ್ನೆಲೆಯಲ್ಲಿ ಸಂತೋಷ್ ಅವರ ಬೆಂಬಲಿಗರು ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಕೆಟ್ ಕೈತಪ್ಪಿದ್ದರಿಂದ  ಅಸಮಾಧಾನಗೊಂಡ​ ಎನ್​​ಆರ್ ಸಂತೋಷ್​, ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಇನ್ನೊಂದೆಡೆ ಎನ್​ಆರ್ ಸಂತೋಷ್​ ಅವರ ಮನೆ ಮುಂದೆ ಅವರ ಅಭಿಮಾನಿಗಳು  ಹೈಡ್ರಾಮಾವನ್ನೇ ಸೃಷ್ಠಿಸಿದ್ದು, ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ, ಬಿಜೆಪಿ ಚುನಾವಣಾ ಪ್ರಚಾರಕ್ಮೆ ರೆಡಿಯಾಗಿದ್ದ ವಾಹನದ ಮೇಲಿನ ಬಿಜೆಪಿ ಕಮಲ ಚಿಹ್ನೆ ಹರಿದು ಹಾಕಿ ಆಕ್ರೋಶ ಹೊರ ಹಾಕಿದರು.ಬಿಎಸ್ ವೈ ಆಪ್ತ ಎನ್.ಆರ್ ಸಂತೋಷ್ ಗೆ ಕೈ ತಪ್ಪಿದ ಟಿಕೆಟ್ bjp bjp 1

ಇನ್ನು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಎನ್​ಆರ್​ ಸಂತೋಷ್, ಬೆಂಬಲಿಗರ ಅಭಿಪ್ರಾಯದಂತೆ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತೀರ್ಮಾನಿಸಿದ್ದು, ಸೋಮವಾರ ಐವತ್ತು ಸಾವಿರ ಜನರರೊಂದಿಗೆ ಹೋಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ  ಮಾಡಿದ್ದಾರೆ.

Key words: Arasikere-Ticket – NR Santosh- Supporters – outraged.