Sunday, September 27, 2026

BDA Apartments

Home Front Page ಲಕ್ಷ್ಮಣ್ ಸವದಿ ಬೆನ್ನಲ್ಲೆ ಮತ್ತೊಂದು ವಿಕೆಟ್ ಪತನ: ಬಿಜೆಪಿಗೆ ಆರ್.ಶಂಕರ್ ಗುಡ್ ಬೈ.

ಲಕ್ಷ್ಮಣ್ ಸವದಿ ಬೆನ್ನಲ್ಲೆ ಮತ್ತೊಂದು ವಿಕೆಟ್ ಪತನ: ಬಿಜೆಪಿಗೆ ಆರ್.ಶಂಕರ್ ಗುಡ್ ಬೈ.

ಹಾವೇರಿ,ಏಪ್ರಿಲ್,12,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿಗೆ ರಾಜೀನಾಮೆ ನೀಡಲು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ನಿರ್ಧರಿಸಿದ್ದಾರೆ.

ಈ ಬೆನ್ನಲ್ಲೆ ಬಿಜೆಪಿ ಮತ್ತೊಂದು ವಿಕೆಟ್ ಪತನವಾಗಿದ್ದು ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್.ಶಂಕರ್ ಸಹ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು  ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಆರ್.ಶಂಕರ್ ಬಿಜೆಪಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಲಕ್ಷ್ಮಣ್ ಸವದಿ ಬೆನ್ನಲ್ಲೆ ಮತ್ತೊಂದು ವಿಕೆಟ್ ಪತನ shankar

ಈ ಕುರಿತು ಮಾತಾನಾಡಿದ ಆರ್. ಶಂಕರ್, ಬಿಜೆಪಿಗೆ ನಾನು ರಾಜೀನಾಮೆ ನೀಡುತ್ತೇನೆ. ಮಧ್ಯಾಹ್ನ 3 ಗಂಟೆಗೆ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಬಿಜೆಪಿ ಸರ್ಕಾರ ಬರಲು ನಾನೂ ಕಾರಣನಾಗಿದ್ದೆ. ಆದರೆ ಟಿಕೆಟ್ ಹಂಚಿಕೆ ವೇಳೆ ನನ್ನನ್ನ ಮರೆತುಬಿಟ್ಟರು.  ನನ್ನ ತಾಳ್ಮೆಯ ಕಟ್ಟೆ ಒಡೆದಿದೆ.  ಈ ಬಾರಿಯೂ ಪಕ್ಷೇತರನಾಗಿ ನಾನು ಸ್ಪರ್ಧಿಸುತ್ತೇನೆ ಎಂದಿದ್ದಾರೆ.

Key words: MLC- R. Shankar –good by-BJP