Sunday, September 27, 2026

BDA Apartments

ಗುಜರಾತ್​​ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕಾಂಗ್ರೆಸ್ಸಿಗರಿಗೆ ಭಯವೇಕೆ....
Home Front Page ಗುಜರಾತ್​​ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕಾಂಗ್ರೆಸ್ಸಿಗರಿಗೆ ಭಯವೇಕೆ..? ಸಂಸದ ಪ್ರತಾಪ್ ಸಿಂಹ ಟಾಂಗ್.

ಗುಜರಾತ್​​ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕಾಂಗ್ರೆಸ್ಸಿಗರಿಗೆ ಭಯವೇಕೆ..? ಸಂಸದ ಪ್ರತಾಪ್ ಸಿಂಹ ಟಾಂಗ್.

ಮೈಸೂರು,ಏಪ್ರಿಲ್,10,2023(www.justkannada.in): ಪ್ರಧಾನಿ ನರೇಂದ್ರ ಮೋದಿ ಅವು  ಬಂಡೀಪುರ ರಾಷ್ಟ್ರೀಯ ಉದ್ಯಾನವನ  ಭೇಟಿ ನೀಡಿ ಸಫಾರಿ ಮಾಡಿದ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಗುಜರಾತ್​​ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಯಾಕೆ ಕಾಂಗ್ರೆಸ್ಸಿಗರು ಭಯಪಡುತ್ತಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಈ ಭಯ ನಿಮ್ಮ ಎದೆಯಲ್ಲಿ ಇರಬೇಕು. ಈ ಭಯ ಮೇ 10ರಂದು ಮತ್ಯಾವ ರೀತಿ ಗೋಚರವಾಗುತ್ತೆ ನೋಡಿ ಎಂದು ಟಾಂಗ್ ನೀಡಿದರು.

ವನ್ಯಜೀವಿಗಳ ಮೇಲಿನ ಕಾಳಜಿಯಿಂದಾಗಿ ಪ್ರಧಾನೊ ಮೋದಿ ಬಂಡೀಪುರಕ್ಕೆ ಬಂದಿದ್ದರು.  ಸಿದ್ದರಾಮಯ್ಯ ಅವರು ಒಂದು ದಿನವೂ ಬಂಡೀಪುರ, ನಾಗರಹೊಳೆಗೆ ಹೋಗಲಿಲ್ಲ. ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗುತ್ತಿದ್ದವರು ನೀವು. ಸಿದ್ದರಾಮಯ್ಯರಿಂದ ಹುಲಿ ಬಗ್ಗೆ ಪಾಠ ಕೇಳಿಬೇಕಿಲ್ಲ ಎಂದು ಪ್ರತಾಪ್ ಸಿಂಹ ಕುಟುಕಿದರು.ಗುಜರಾತ್​​ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕಾಂಗ್ರೆಸ್ಸಿಗರಿಗೆ ಭಯವೇಕೆ....

ಮೂರು ಹೆಲಿಕಾಪ್ಟರ್ ​ಗಳು​ ಬಂದಿದ್ದಕ್ಕೆ ಪ್ರಾಣಿಗಳು ಅರಣ್ಯದೊಳಗೆ ಹೋಗಿವೆ. ಹೆಲಿಕಾಪ್ಟರ್​ ಶಬ್ದ ಹೆಚ್ಚಾಗಿ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿವೆ. ಕನಿಷ್ಠ ಲೋಕ ಜ್ಞಾನವೂ ನಿಮಗೆ ಇಲ್ಲ ಅಂದರೆ ಹೇಗೆ ಹೇಳಿ? ಎಂದು ಕಿಡಿಕಾರಿದರು.

Key words: Congress- afraid –Gujarat- lion –modi- Karnataka- MP -Pratap Simha