Sunday, August 23, 2026

BDA Apartments

Home Front Page ನಂಜನಗೂಡು: ದರ್ಶನ್ ಧ್ರುವನಾರಾಯಣ್ ಅವಿರೋಧ ಆಯ್ಕೆಗೆ ಆಗ್ರಹ

ನಂಜನಗೂಡು: ದರ್ಶನ್ ಧ್ರುವನಾರಾಯಣ್ ಅವಿರೋಧ ಆಯ್ಕೆಗೆ ಆಗ್ರಹ

ಮೈಸೂರು, ಏಪ್ರಿಲ್ 09, 2023 (www.justkannada.in): ದರ್ಶನ್ ಧ್ರುವನಾರಾಯಣ್ ವಿರುದ್ಧ ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬಾರದು ಎಂಬ ಒತ್ತಾಯ ಕೇಳಿ ಬಂದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಹನೂರು ಕ್ಷೇತ್ರದ ಅಭ್ಯರ್ಥಿ ಎಂ.ಆರ್. ಮಂಜುನಾಥ್ ಅವರು ದರ್ಶನ್ ಧ್ರುವನಾರಾಯಣ್ ವಿರುದ್ಧ ಯಾವುದೇ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬಾರದು ಎಂದು ಒತ್ತಾಯಿಸಿದರು.

ದರ್ಶನ್ ತಿಂಗಳ ಅಂತರದಲ್ಲಿ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿರುವುದು ದುರ್ದೈವ, ಇದನ್ನು ಮನಗಂಡು ತಾಯಿ ಹೃದಯದ ಕುಮಾರಸ್ವಾಮಿ ಅವರು ಉತ್ತಮ ನಿರ್ಧಾರ ಕೈಗೊಂಡಿದ್ದು ನಂಜನಗೂಡು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರಲು ತೀರ್ಮಾನಿಸಿದ್ದಾರೆ. ಬಿಜೆಪಿ ಕೂಡ ಇದೇ ಮಾರ್ಗ ಅನುಸರಿಸಬೇಕು ಎಂದು ಆಗ್ರಹಿಸಿದರು.

ದರ್ಶನ್ ಅವರ ಅವಿರೋಧ ಆಯ್ಕೆ ಆದಲ್ಲಿ ನಮ್ಮನ್ನೆಲ್ಲ ಅಗಲಿದ ಹಿರಿಯ ನಾಯಕ ಧ್ರುವನಾರಾಯಣ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದರು.