Sunday, August 23, 2026

BDA Apartments

Home Front Page ಮಧುಮಲೈನಿಂದ ಮೈಸೂರಿಗೆ ಮೋದಿ ಆಗಮನ: ಮುಕ್ತ ವಿವಿ ಘಟಿಕೋತ್ಸವ ಭವನದ ಕಾರ್ಯಕ್ರಮದಲ್ಲಿ ಭಾಗಿ

ಮಧುಮಲೈನಿಂದ ಮೈಸೂರಿಗೆ ಮೋದಿ ಆಗಮನ: ಮುಕ್ತ ವಿವಿ ಘಟಿಕೋತ್ಸವ ಭವನದ ಕಾರ್ಯಕ್ರಮದಲ್ಲಿ ಭಾಗಿ

ಮೈಸೂರು, ಏಪ್ರಿಲ್ 09, 2023 (www.justkannada.in): ಮೈಸೂರಿನ ಕರಾಮುವಿ ಘಟಿಕೋತ್ಸವ ಭವನದಲ್ಲಿ 2022 ರ ಹುಲಿ ಗಣತಿ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರ ಓವಲ್ ಮೈದಾನದ ಹೆಲಿಪ್ಯಾಡ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದರು.

ಬಂಡೀಪುರದ ಹುಲಿ ಸಂರಕ್ಷಿತ ಅಭಯಾರಣ್ಯಕ್ಕೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂಭ್ರಮಾಚರಣೆಗಾಗಿ ಚಾಮರಾಜನಗರದ ಬಂಡಿಪುರಕ್ಕೆ ಭೇಟಿ ನೀಡಿದ್ದರು.

ಕೆ.ಎಸ್.ಓ.ಯು ಘಟಿಕೋತ್ಸವ ಭವನದ ಕಾರ್ಯಕ್ರಮದಲ್ಲಿಮೋದಿ ಅವರು ಭಾಗಿಯಾಗಲಿದ್ದಾರೆ. ಹುಲಿ ವರದಿ ಬಿಡುಗಡೆ, ಬಂಡಿಪುರ ಹುಲಿ ಯೋಜನೆ ನೆನಪಿನಾರ್ಥ ಹೊರತಂದಿರುವ ನಾಣ್ಯವನ್ನು ಮೋದಿ ಬಿಡುಗಡೆ ಮಾಡಲಿದ್ದಾರೆ.