Saturday, October 17, 2026

Dasara Wishes

Happy Dasara
Home Front Page ಮಹೇಶ್ ಕುಮಟಳ್ಳಿಗೆ ಸೋಲಿನ ವಾತಾವರಣ ಇದೆ: ನನಗೆ ಟಿಕೆಟ್ ನೀಡಿ ಎಂದಿದ್ದೇನೆ- ಮಾಜಿ ಡಿಸಿಎಂ ಲಕ್ಷ್ಮಣ್...

ಮಹೇಶ್ ಕುಮಟಳ್ಳಿಗೆ ಸೋಲಿನ ವಾತಾವರಣ ಇದೆ: ನನಗೆ ಟಿಕೆಟ್ ನೀಡಿ ಎಂದಿದ್ದೇನೆ- ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ.

ಬೆಳಗಾವಿ,ಏಪ್ರಿಲ್,7,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು ಅಥಣಿ ಕ್ಷೇತ್ರದ ಟಿಕಟ್ ಗಾಗಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಮತ್ತು ಮಹೇಶ್ ಕುಮಟಳ್ಳಿ ನಡುವೆ ಪೈಪೋಟಿ ಇದೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಅಥಣಿ ಕ್ಷೇತ್ರದ ಟಿಕೆಟ್ ಕಗ್ಗಂಟಾಗಿದೆ. ಮಹೇಶ್ ಕುಮಟಳ್ಳಿಗೆ ಸೋಲಿನ ವಾತಾವರಣ ಇದೆ. ಈ ಸೋಲನ್ನ ನನ್ನ ತಲೆಗೆ   ಕಟ್ಟಲು ಕೆಲವರು ಯತ್ನಿಸುತ್ತಿದ್ದಾರೆ. ಪಕ್ಷಕ್ಕೆ ಅಭ್ಯರ್ಥಿ ಸೋಲು ಬೇಡ. ನನಗೆ ಟಿಕೆಟ್ ಕೊಡಿ ಎಂದಿದ್ದೇನೆ. ಕೋರ್ ಕಮಿಟಿ ಸಭೆಯಲ್ಲಿ ಎಲ್ಲಾ ವಿಚಾರ ಹೇಳಿದ್ದೇನೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೆ ನೋಡೋಣಾ ಎಂದು ಹೇಳಿದರು.

ಇನ್ನು ಇತ್ತ ತನ್ನ ಆಪ್ತ ಮಹೇಶ್ ಕುಮಟಳ್ಳಿಗೆ ಅಥಣಿ ಕ್ಷೇತ್ರದ ಟಿಕೆಟ್ ಕೊಡಿಸಲು ರಮೇಶ್ ಜಾರಕಿಹೊಳಿ ಲಾಬಿ ನಡೆಸುತ್ತಿದ್ದಾರೆ.

Key words: Athani-BJP- ticket-Mahesh Kumatalli- Former DCM- Laxman Savadi.