Thursday, October 1, 2026

BDA Apartments

Welcome to Just Kannada Online News Portal BDA JK_Adv BDA Adv
Home Front Page 100 ಸ್ಥಾನ ಗೆಲ್ಲಲ್ಲ ಎಂದ ಸಚಿವ ಸುಧಾಕರ್ ಗೆ ತಿರುಗೇಟು: 2ನೇ ಪಟ್ಟಿಯಲ್ಲೇ  ಹಾಸನ ಟಿಕೆಟ್...

100 ಸ್ಥಾನ ಗೆಲ್ಲಲ್ಲ ಎಂದ ಸಚಿವ ಸುಧಾಕರ್ ಗೆ ತಿರುಗೇಟು: 2ನೇ ಪಟ್ಟಿಯಲ್ಲೇ  ಹಾಸನ ಟಿಕೆಟ್ ಘೋಷಣೆ-ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಏಪ್ರಿಲ್,4,2023(www.justkannada.in): ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಾಸನ ಜೆಡಿಎಸ್ ಟಿಕೆಟ್ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಅಭ್ಯರ್ಥಿಗಳ 2ನೇ ಪಟ್ಟಿಯಲ್ಲೇ  ಹಾಸನ ಟಿಕೆಟ್ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಇಂದು ಮಂಗಳವಾರವಾದ ಹಿನ್ನೆಲೆ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಿಲ್ಲ. ನಾಳೇ ಸಂಜೆ ಅಥವಾ ಗುರುವಾರ ಪಟ್ಟಿ ರಿಲೀಸ್  ಮಾಡುತ್ತೇವೆ. ನಾಳೆ ದೇವೇಗೌಡರು ದೆಹಲಿಯಿಂದ ಬರುತ್ತಾರೆ. ಎಲ್ಲರಿಗೂ ಹಾಸನ ಟಿಕೆಟ್ ಬಗ್ಗೆ ಕುತೂಹಲವಿದೆ. ಹಾಸನ ಬಿಟ್ರೆ ಬೇರೆ ಕಥೆ ಹುಟ್ಟಿಕೊಳ್ಳುತ್ತೆ.  ಹೀಗಾಗಿ 2ನೇ ಪಟ್ಟಿಯಲ್ಲಿ ಹಾಸನ ಟಿಕೆಟ್ ಘೋಷಣೆ ಮಾಡುತ್ತೇವೆ ಎಂದರು.

ಜೆಡಿಎಸ್ 100 ಸ್ಥಾನ ಗೆದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ ಸಚಿವ ಸುಧಾಕರ್ ಗೆ ತಿರುಗೇಟು ನೀಡಿದ ಹೆಚ್.ಡಿ ಕುಮಾರಸ್ವಾಮಿ, ಸುಧಾಕರ್ ಅವರ ಹಣದ ದಾಹ ಪ್ರತಿ ಹಳ್ಳಿಗೂ ಗೊತ್ತಿದೆ. ಜನರಿಗೆ ಟಿವಿ ಫ್ರಿಡ್ಜ್ ಸ್ಟವ್ ಸೇರಿ ಎಲ್ಲವನ್ನೂ ಹಂಚಿದ್ದಾರೆ. ಪಾಪ ಸುಧಾಕರ್ ಸಂಪದ್ಭರಿತವಾಗಿದ್ದಾರೆ. ಇವರು ಇಷ್ಟೊಂದು ಮಾಡಿದ್ದಾರಲ್ಲ ಅಂತಾ ಮನೆಯಲ್ಲೇ ಕೂರಿಸಿಬಿಟ್ರೆ ಆಗ ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ ಆ ರೀತಿ ಆದರೆ ಏನ್ಮಾಡುತ್ತಾರೆ. ಸ್ವಲ್ಪ ಎಚ್ಚರಿಕೆಯಿಂದ ಇದ್ದರೇ ಒಳ್ಳೆಯದು ಎಂದು ಲೇವಡಿ ಮಾಡಿದರು.

Key words:  Hassan’s- ticket –announce- 2nd list – HD Kumaraswamy.