ಬೆಂಗಳೂರು,ಮಾರ್ಚ್,31,2023(www.justkannada.in): ಓಲೈಕೆಗಾಗಿ ಕಾಂಗ್ರೆಸ್  ಮುಸ್ಲಿಮರಿಗೆ ಮೀಸಲಾತಿ ನೀಡಿತ್ತು. ಆದರೆ ಅದನ್ನ ರದ್ದುಪಡಿಸಿ ಎಲ್ಲರಿಗೂ ನಾವು ನ್ಯಾಯ ಒದಗಿಸಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಧರ್ಮದ ಆಧಾರದಲ್ಲಿ ಯಾರಿಗೂ ಮೀಸಲಾತಿ ನೀಡುವಂತಿಲ್.  ಒಲೈಕೆಗಾಗಿ ಕಾಂಗ್ರೆಸ ಮುಸ್ಲೀಂರಿಗೆ ಮೀಸಲಾತಿ ನೀಡಿತ್ತು.  ಸಂವಿಧಾನ ಬಾಹಿರವಾಗಿ ಕಾಂಗ್ರೆಸ್ ಪಕ್ಷ ಮೀಸಲಾತಿ ನೀಡಿತ್ತು ಅದನ್ನ ತೆಗೆದು ಹಾಕಿ ಎಲ್ಲರಿಗೂ ನಾವು ನ್ಯಾಯ ಒದಗಿಸಿದ್ದೇವೆ. ಲಿಂಗಾಯತ, ಒಕ್ಕಲಿಗ ಹಿಂದುಳಿದ ಜಾತಿಗೆ ಮೀಸಲಾತಿ ನೀಡಿದ್ದೇವೆ ಎಂದರು.
ಬೋವಿ, ಕೊರಚ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ ಕಾಂಗ್ರೆಸ್ ಪಕ್ಷ ಷಡ್ಯಂತ್ರದಿಂದ ತಪ್ಪು ಮಾಡಿದೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.
Key words: Congress – reservation – Muslims- Union Minister -Shobha Karandhlaje.
            





