Thursday, August 20, 2026

BDA Apartments

Home Crime  ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಬಂಧನಕ್ಕೆ ಕೋರ್ಟ್ ಸೂಚನೆ.

 ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಬಂಧನಕ್ಕೆ ಕೋರ್ಟ್ ಸೂಚನೆ.

ಚಿಕ್ಕಮಗಳೂರು,ಮಾರ್ಚ್,30,2023(www.justkannada.in): ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ದ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.

ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ  ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಗೆ  ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ.

ಶಾಸಕ ಎಂ.ಪಿ ಕುಮಾರಸ್ವಾ ವಿರುದ್ದ ಹೂವಪ್ಪಗೌಡ ಎಂಬುವವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಸಾಲದ ರೂಪದಲ್ಲಿ1ಕೋಟಿ,38 ಲಕ್ಷದ 65 ಸಾವಿರ ರೂ. ಹಣ ಪಡೆದು ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದರು. ಶಾಸಕ ಕುಮಾರಸ್ವಾಮಿ ನೀಡಿದ್ದ 8 ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಹೂವಪ್ಪಗೌಡ ದೂರು ದಾಖಲಿಸಿದ್ದರು.

30 ದಿನದೊಳಗೆ ಹಣ ಮರುಪಾವತಿ ಮಾಡುವಂತೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಕೋರ್ಟ್ ಸೂಚನೆ ನೀಡಿತ್ಉ. ಆದರೆ ಹಣ ಮರುಪಾವತಿಸದ ಹಿನ್ನೆಲೆ ಬಂಧನಕ್ಕೆ ಆದೇಶಿಸಿದೆ.

Key words: check bounce-  case -Court – arrest -BJP -MLA- MP Kumaraswamy.