ಕಾಂಗ್ರೆಸ್ ಸೇರ್ಪಡೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಭೈರತಿ ಬಸವರಾಜು.

ಬೆಂಗಳೂರು,ಮಾರ್ಚ್,30,2023(www.justkannada.in): ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜು ಕಾಂಗ್ರೆಸ್ ಸೇರ್ಪಡೆ ವದಂತಿ ಹಿನ್ನೆಲೆ ಈ ಕುರಿತು ಸ್ವತಃ ಸಚಿವ ಭೈರತಿ ಬಸವರಾಜು ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಭೈರತಿ ಬಸವರಾಜು, ಕಾಂಗ್ರೆಸ್ ನಿಂದ ನನಗೆ ಯಾವುದೇ ಆಹ್ವಾನ ಬಂದಿಲ್ಲ. ನನಗೆ ಯಾರು ಫೋನ್ ಆಗಲಿ ನೇರವಾಗಿ ಆಹ್ವಾನ ಕೊಟ್ಟಿಲ್ಲ. ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದು ಹೇಳಿದರು.

ಹಾಗೆಯೇ  ನಾನು ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈ ಬಾರಿಯೂ ಜನ ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಸಚಿವ ಭೈರತಿ ಬಸವರಾಜು ತಿಳಿಸಿದರು.

Key words: Minister -Bhairati Basavaraju -clarified -about – Congress –joining- rumour