Wednesday, July 29, 2026

BDA Apartments

Home Front Page ಕಲ್ಯಾಣ ಕರ್ನಾಟಕ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರಕೋಟೆ – ಬಾಬೂರಾವ್ ಚಿಂಚನಸೂರ್

ಕಲ್ಯಾಣ ಕರ್ನಾಟಕ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರಕೋಟೆ – ಬಾಬೂರಾವ್ ಚಿಂಚನಸೂರ್

ಕಲ್ಬುರ್ಗಿ,ಮಾರ್ಚ್,23,2023(www.justkannada.in): ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಬಾಬೂರಾವ್ ಚಿಂಚನಸೂರ್ ಇದೀಗ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಗುಣಗಾನ ಮಾಡಿದ್ದಾರೆ.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಬಾಬೂರಾವ್ ಚಿಂಚನಸೂರ್, ಕಲ್ಯಾಣ ಕರ್ನಾಟಕ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರಕೋಟೆ. ಇಡೀ ದೇಶಕ್ಕೆ ಗುರುತಿಸುವಷ್ಟು ಖರ್ಗೆ ಬೆಳೆದಿದ್ದಾರೆ ಈ ಬಾರಿ ಪ್ರಿಯಾಂಕ್ ಖರ್ಗೆ ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಭದ್ರಕೋಟೆ ಮತ್ತಷ್ಟು ಭದ್ರವಾಗುತ್ತದೆ ಎಂದರು.

ಹಾಗೆಯೇ  ಈ ಬಾರಿ ಬಾಬೂರಾವ್ ಚಿಂಚನಸೂರ್ ಶಕ್ತಿ ಗೊತ್ತಾಗುತ್ತದೆ.  ಅಧಿಕಾರಕ್ಕಾಗಿ ಆಸೆ ಪಟ್ಟಿಲ್ಲ ನಾನು ಅವಕಾಶವಾದಿ ವ್ಯಕ್ತಿಯೂ ಅಲ್ಲ. ಮಲ್ಲಿಕಾರ್ಜುನ ಖರ್ಗೆಮಾತನಾಡಿದ್ರೆ ವಿಧಾನಸೌಧ, ಲೋಕಸಭೆ ನಡುಗುತ್ತದೆ ಎಂದು ಬಾಬೂರಾವ್ ಚಿಂಚನಸೂರ್ ಹೇಳಿದರು.

Key words: Kalyan Karnataka -Mallikarjuna Kharge– Baburao Chinchanasur