Saturday, October 17, 2026

Dasara Wishes

CIMS ಡೀನ್‌ ಡಾ. ಮಂಜುನಾಥ್‌ ದಬ್ಬಾಳಿಕೆ : ಸಿಡಿದ ವೈದ್ಯ ವಿದ್ಯಾರ್ಥಿಗಳಿಂದ ಪ್ರತ...
Happy Dasara
Home Front Page ಜೆಡಿಎಸ್ ಬಗ್ಗೆ ಪರಮೇಶ್ವರ್ ಹಗುರ ಮಾತು: ಸರ್ಕಾರ ನಡೆಸುವುದನ್ನ ಇವರಿಂದ ಕಲಿಯಬೇಕಿಲ್ಲ ಎಂದ ಮಾಜಿ ಸಿಎಂ...

ಜೆಡಿಎಸ್ ಬಗ್ಗೆ ಪರಮೇಶ್ವರ್ ಹಗುರ ಮಾತು: ಸರ್ಕಾರ ನಡೆಸುವುದನ್ನ ಇವರಿಂದ ಕಲಿಯಬೇಕಿಲ್ಲ ಎಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಸಿಜೆಪಿಗೆ ಫಂಡ್‌ ಮಾಡುತ್ತಿರುವುದು ಕಾಂಗ್ರೆಸ್:‌ ರಜ್ಯದ ಹಣ ಲೂಟಿ ಮಾಡಿ ದೆಹಲಿಗೆ ಸಾಗಾಟ-ಕೇಂದ್ರ ಸಚಿವ ಹೆಚ್‌ ಡಿಕೆ

ಹಾಸನ,ಮಾರ್ಚ್,14,2023(www.justkannada.in): ಜೆಡಿಎಸ್ ಬಗ್ಗೆ ಡಾ. ಜಿ.ಪರಮೇಶ್ವರ್ ಹಗುರವಾಗಿ ಮಾತನಾಡಿದ್ದಾರೆ. ನಾನು  ಸರ್ಕಾರ ನಡೆಸುವುದಿನ್ನ ಇವರಿಂದ ಕಲಿಯಬೇಕಿಲ್ಲ ಎಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಸ್ವತಂತ್ರ ಸರ್ಕಾರ ತರಬೇಕೆಂದು ನಾನು ಹೋರಾಟ ಮಾಡುತ್ತಿದ್ದೇನೆ. ಪಂಚರತ್ನ ಯೋಜನೆ ಜಾರಿಗಾಗಿ ಸ್ವತಂತ್ರ ಸರ್ಕಾರ ಕೇಳುತ್ತಿದ್ದೇನೆ.  ಜೆಡಿಎಸ್ ಗೆ ಬೇಕಿರುವುದು 25 ಸ್ಥಾನ ಎಂದು ಪರಮೇಶ್ವರ್ ಹೇಳಿದ್ದಾರೆ. ಜೆಡಿಎಸ್  ಬಗ್ಗೆ ಪರಮೇಶ್ವರ್ ಲಘುವಾಗಿ ಮಾತನಾಡಿದ್ದಾರೆ. ನನಗೆ 2 ಬಾರಿ ಅವಕಾಶ ನೀಡಿದಾಗಲೂ ನಾನು ಜನಪರ ಕೆಲಸ ಮಾಡಿದ್ದೇನೆ.  ಸರ್ಕಾರ ನಡೆಸುವುದಿನ್ನ ನಾನು ಇವರಿಂದ ಕಲಿಯಬೇಕಿಲ್ಲ. ನಾನು ಗ್ರೌಂಡ್ ರಿಯಾಲಿಟಿಯಿಂದ ಯೋಜನೆ ಸಿದ್ದಪಡಿಸಿದ್ದೇನೆ ಎಂದರು.

ಹಾಸನ ವಿಧಾನಸಭಾ ಕ್ಷೇತ್ರಕ್ಕೆ  ಬೇರೆ ಬೇರೆ ಹೆಸರುಗಳು ಓಡಾಡುತ್ತಿದೆ. ಹೆಚ್.ಡಿ ದೇವೇಗೌಡರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಹಾಸನ ಜಿಲ್ಲೆಯ ಸಂಪೂರ್ಣ ನರನಾಡಿ ನನಗೆ ಗೊತ್ತಿಲ್ಲ . ಹಾಸನ ಜಿಲ್ಲೆ ರಾಜಕಾರಣದ ಬಗ್ಗೆ ದೇವೇಗೌಡರಿಗೆ ಇಂಚಿಂಚೂ  ಗೊತ್ತು ಎಂದು ಹೆಚ್.ಡಿಕೆ ತಿಳಿಸಿದರು.

Key words: Parameshwar  -JDS-Former CM -HD Kumaraswamy –government