Wednesday, August 19, 2026

BDA Apartments

Home Cinema ‘ಪ್ರಿಮಿಯರ್ ಪದ್ಮಿನಿ’ ಮೇಲೆ ಕೃತಿ ಚೌರ್ಯದ ಆರೋಪ

‘ಪ್ರಿಮಿಯರ್ ಪದ್ಮಿನಿ’ ಮೇಲೆ ಕೃತಿ ಚೌರ್ಯದ ಆರೋಪ

ಬೆಂಗಳೂರು, ಮೇ 11, 2019 (www.justkannada.in): ಪ್ರೀಮಿಯರ್‌ ಪದ್ಮಿನಿ ಚಿತ್ರದ ಕೆಲವು ಭಾಗಗಳನ್ನು ತನ್ನ ವರ್ಣಮಯ ಪ್ರಬಂಧ ಸಂಕಲನದ ಪ್ರಬಂಧದಿಂದ ಕದಿಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಬಂಧದ ಕೆಲ ಭಾಗಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ತನಗೆ ಸಂಭಾವನೆ ಕೊಟ್ಟಿಲ್ಲ. ತನಗೆ ಕ್ರೆಡಿಟ್ಟನ್ನೂ ಕೊಟ್ಟಿಲ್ಲ ಎಂದು ಕತೆಗಾರ ವಸುಧೇಂದ್ರ ದೂರಿದ್ದಾರೆ.

ನಿರ್ದೇಶಕ ರಮೇಶ್‌ ಇಂದಿರಾ ಅವರ ಪ್ರೀಮಿಯರ್‌ ಪದ್ಮಿನಿ ಸಿನಿಮಾದಲ್ಲಿರುವ ನಂಜುಂಡಿ ಪಾತ್ರವು ನನ್ನ ವರ್ಣಮಯ ಪುಸ್ತಕದಲ್ಲಿರುವ ಸುದೀರ್ಘ ಪ್ರಬಂಧ ನಂಜುಂಡಿಯಿಂದ ತೆಗೆದುಕೊಂಡದ್ದು. ಅದರ ಬಹುತೇಕ ವಿವರಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಎಂದು ವಸುಧೇಂದ್ರ ಆರೋಪಿಸಿದ್ದಾರೆ.

ಆದರೆ ಈ ಕುರಿತ ಆರೋಪವನ್ನು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ನಿರಾಕರಿಸಿದ್ದಾರೆ.