ದಾಖಲೆ ಗಳಿಕೆ ಕಂಡ ಮಹೇಶ್ ಬಾಬು ‘ಮಹರ್ಷಿ’

ಬೆಂಗಳೂರು, ಮೇ 11, 2019 (www.justkannada.in): ಮಹೇಶ್ ಬಾಬು ಅಭಿನಯದ ‘ಮಹರ್ಷಿ’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ದಾಖಲೆ ಗಳಿಕೆ ಮಾಡುತ್ತಿದೆ.

ಚಿತ್ರ ಮೊದಲ ದಿನವೇ ಗಳಿಕೆಯಲ್ಲಿ ಗಮನ ಸೆಳೆದಿದೆ. 45 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ ಎನ್ನಲಾಗಿದೆ.

ಕಾರ್ಪೊರೇಟ್ ಕಂಪನಿಯ ಸಿಇಒ ಆಗಿ ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ. ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಪೂಜಾ ಹೆಗಡೆ ನಟಿಸಿದ್ದಾರೆ.