Sunday, August 23, 2026

BDA Apartments

Home Front Page ಬಿಜೆಪಿ ಪ್ರನಾಳಿಕೆ ರಚನೆಗೆ 1 ಕೋಟಿ ಜನರ ಸಂಪರ್ಕ: ಸಚಿವ ಡಾ.ಕೆ.ಸುಧಾಕರ್

ಬಿಜೆಪಿ ಪ್ರನಾಳಿಕೆ ರಚನೆಗೆ 1 ಕೋಟಿ ಜನರ ಸಂಪರ್ಕ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಮಾರ್ಚ್ 05, 2023 (www.justkannada.in): ಒಂದು ಕೋಟಿ ಜನರನ್ನು ಸಂಪರ್ಕಿಸಿ ಸಲಹೆ ಬಿಜೆಪಿ ಪ್ರನಾಳಿಕೆ ಸಿದ್ಧಪಡಿಸಲಾಗುತ್ತದೆ ಎಂದು ಬಿಜೆಪಿ ಪ್ರಣಾಳಿಕೆ ಸಮಿತಿ ಸಂಚಾಲಕ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆಯನ್ನು ರಚಿಸುವ ಮುನ್ನ ಸಮಿತಿಯು ಸುಮಾರು ಒಂದು ಕೋಟಿ ಜನರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಲಾಗುತ್ತದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸುಧಾರಣೆಗಳನ್ನು ತರುವ ಮೂಲಕ, ನಿಯಮಗಳನ್ನು ಬದಲಾಯಿಸುವ ಮೂಲಕ, ರೆಡ್-ಟ್ಯಾಪಿಸಂ ಅನ್ನು ಕಡಿತಗೊಳಿಸುವ ಮೂಲಕ ಮತ್ತು ವಿಶೇಷ ಉಪಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜನರ ಜೀವನವನ್ನು ಸುಧಾರಿಸಲು ಬಯಸುತ್ತಿದ್ದೇವೆ ಎಂದು ಹೇಳಿದರು.

ಜನರ ಎಲ್ಲಾ ಸಲಹೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಅವುಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.