Tuesday, September 29, 2026

BDA Apartments

Home Front Page ಎಡಿಜಿಪಿ ಜೈಲಿಗೆ ಹೋಗಿದ್ದು, ಈಶ್ವರಪ್ಪ ಹೆಸರು ಬರೆದು ಗುತ್ತಿಗೆದಾರ ಆತ್ಮಹತ್ಯೆ: ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿಬೇಕಾ..? ಸಿದ್ಧರಾಮಯ್ಯ...

ಎಡಿಜಿಪಿ ಜೈಲಿಗೆ ಹೋಗಿದ್ದು, ಈಶ್ವರಪ್ಪ ಹೆಸರು ಬರೆದು ಗುತ್ತಿಗೆದಾರ ಆತ್ಮಹತ್ಯೆ: ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿಬೇಕಾ..? ಸಿದ್ಧರಾಮಯ್ಯ ವಾಗ್ದಾಳಿ.

ಬೆಂಗಳೂರು,ಮಾರ್ಚ್,4,2023(www.justkannada.in): ಸರ್ಕಾರದ ವಿರುದ್ಧದ ಭ್ರಷ್ಟಾಚಾರಕ್ಕೆ ದಾಖಲೆ ಕೊಡಿ ಅಂತಾರೆ. ಪಿಎಸ್ ಐ ಹಗರಣದಲ್ಲಿ ಎಡಿಜಿಪಿ ಜೈಲಿಗೆ ಹೋಗಿದ್ದು, ಈಶ್ವರಪ್ಪ ಹೆಸರು ಬರೆದು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿಬೇಕಾ..? ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ,   ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟಾಚಾರ ನೋಢಿಲ್ಲ ಬಿಜೆಪಿ ಅಂದರೇ ಸುಳ್ಳಿನ ಫ್ಯಾಕ್ಟರಿ. ಮೋದಿ ಅಮಿತ್ ಶಾ , ಕಟೀಲ್ ಸುಳ್ಳು ಹೇಳ್ತಾರೆ. ನಾವು ಭ್ರಷ್ಟಾಚಾರ ಆರೋಪ ಮಾಡಿದರೇ ದಾಖಲೆ ಕೊಡಿ ಅಂತಾರೆ. ಹಿಂದಿನ ಕಾಲದಲ್ಲೂ ಭ್ರಷ್ಟಾಚಾರ ನಡೆದಿತ್ತು ಅಂತಾರೆ.  ಬಿಜೆಪಿ ಅಂದರೆ ಭ್ರಷ್ಟ ಜನತಾ ಪಾರ್ಟಿ ಅಂತಾ ಕರೆಯಬೇಕಾಗುತ್ತದೆ.   ಪಿಎಸ್ ಐ ಹಗರಣದಲ್ಲಿ ಎಡಿಜಿಪಿ ಸುಮ್ಮನೇ ಜೈಲಿಗೆ ಹೋಗಿದ್ರಾ..?  ಡಿಸಿ ಜೈಲಿಗೆ ಹೋಗಿದ್ದ ಇದಕ್ಕಿಂತ ಸಾಕ್ಷಿ ಬೆಕಾ..? ಈಶ್ವರಪ್ಪ ಹೆಸರು ಬರೆದು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಇದಕ್ಕಿಂತ ಸಾಕ್ಷಿ ಬೇಕಾ..?  ಎಂದು ಪ್ರಶ್ನಿಸಿದರು.ಎಡಿಜಿಪಿ ಜೈಲಿಗೆ ಹೋಗಿದ್ದು siddaramaiah siddaramaiah 2

ಖರ್ಗೆಯನ್ನಕಾಂಗ್ರೆಸ್ ಕಡೆಗಣಿಸಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕಿಡಿಕಾರಿದ ಸಿದ್ಧರಾಮಯ್ಯ, ಎಐಸಿಸಿ ಅಧ್ಯಕ್ಷರಿಗೆ ಗೌರವ ಕೊಡುವುದನ್ನ ನಿಮ್ಮಿಂದ ಕಲಿಯೇಬೇಕಿಲ್ಲ. ಅಡ್ವಾಣಿ, ಎಂಎಂ ಜೋಶಿಯನ್ನ ಸೈಡ್ ಲೈನ್ ಮಾಡಿದ್ದು ನೀವು.  ಅನಂತ ಕುಮಾರ್ ಪತ್ನಿಗೆ ಟಿಕೆಟ್ ಕೊಡದೆ ಮೋಸ ಮಾಡಿದ್ರಿ  ಬಿಎಸ್ ವೈ ಕೆಳಗಿಳಿಸಿದ್ರಿ. ನಿಮ್ಮ ಮಾತು ಕೇಳುವ ಬೊಮ್ಮಾಯಿ ಸಿಎಂ ಮಾಡಿದ್ರಿ ಎಂದು ಹರಿಹಾಯ್ದರು.

Key words: Former CM-Siddaramaiah-Outrage-bjp