ಶಿವಾಜಿ ಪ್ರತಿಮೆಗೆ ಸಿದ್ಧರಾಮಯ್ಯ ಹಣ ನೀಡಿದ್ರೆ ಹೇಳಲಿ. ಅವರನ್ನೇ ಕರೆಸಿ ಉದ್ಘಾಟನೆ ಮಾಡಿಸ್ತೇನೆ- ಸಿಎಂ ಬೊಮ್ಮಾಯಿ ಟಾಂಗ್.

ಬೆಳಗಾವಿ,ಮಾರ್ಚ್,2,2023(www.justkannada.in): ಬೆಳಗಾವಿಯಲ್ಲಿ ಶಿವಾಜಿ ಮೂರ್ತಿ ನಿರ್ಮಾಣಕ್ಕೆ ಹಣ ನೀಡಿದ್ದೆ ಎಂಬ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಶಿವಾಜಿ  ಪ್ರತಿಮೆ  ಉದ್ಘಾಟನೆ ಮಾಡಿದ್ದಕ್ಕೆ ಖುಷಿಯಾಗಿದೆ.  ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಅನುದಾನ ನೀಡಿದ್ಯಾರು ..? ಸಿದ್ದರಾಮಯ್ಯ ಸರ್ಕಾರವೋ…?  ಬಿಎಸ್ ವೈ ಗೌರ್ನಮೆಂಟೋ..? ಸಿದ್ದರಾಮಯ್ಯ ಅನುದಾನ ನೀಡಿಲ್ಲ. ಸಿದ್ದರಾಮಯ್ಯ ಸರ್ಕಾರದಿಂದ ಹಣ ನೀಡಿದ್ರೆ ಹೇಳಲಿ ನಾನೇ ಅವರನ್ನ ಕರೆಸಿ ಮತ್ತೆ ಉದ್ಗಾಟನೆ ಮಾಡಿಸುತ್ತೇನೆ ಎಂದು ಬಹಿರಂಗ ಸವಾಲು ಹಾಕಿದರು.

500 ರೂ. ಕೊಟ್ಟು ಜನರನ್ನ ಕರೆಸಿ ಎಂಬ  ಸಿದ್ಧರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಮೊದಲಿನಿಂದರಲೂ ಇದೇ ಅವರ ಪರಿಸ್ಥಿತಿ. ಅದು ಈಗ ಬಹಿರಂಗವಾಗಿದೆ ಎಂದು ಲೇವಡಿ ಮಾಡಿದರು.

Key words: belagavi-shivaji statue-former CM-Siddaramaiah-CM Basavaraja bommai