Thursday, August 13, 2026

BDA Apartments

Home Front Page ಮಾರ್ಚ್ 4ರಂದು ಯು ಡಿಜಿಟಲ್ ನೆಟ್ ವರ್ಕ್’ 3ನೇ ವಾರ್ಷಿಕೋತ್ಸವ

ಮಾರ್ಚ್ 4ರಂದು ಯು ಡಿಜಿಟಲ್ ನೆಟ್ ವರ್ಕ್’ 3ನೇ ವಾರ್ಷಿಕೋತ್ಸವ

ಮೈಸೂರು, ಫೆಬ್ರವರಿ 28, 2023 (www.justkannada.in): ಯು ಡಿಜಿಟಲ್ ನೆಟ್ ವರ್ಕ್’ನ 3ನೇ ವಾರ್ಷಿಕೋತ್ಸವ ಮಾರ್ಚ್ 4ರಂದು ಸಂಜೆ 6.30ಕ್ಕೆ ನಡೆಯಲಿದೆ.

ಮೈಸೂರಿನ ಸೈಲೆಂಟ್ ಶೋರ್ಸ್ ಆ್ಯಂಪಿ ಥಿಯೇಟರ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಲವು ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಗುತ್ತದೆ.

ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಝೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಅವರನ್ನು ಪುರಸ್ಕರಿಸಲಾಗುತ್ತದೆ. ಇದೇ ವೇಳೆ ಪ್ರಮುಖ ಬ್ರಾಡ್ ಕ್ಯಾಸ್ಟರ್ ಗಳಾದ ಜೀ, ಕಲರ್ಸ್, ಸ್ಟಾರ್, ಸೋನಿ, ಉದಯ ಹಾಗೂ ಡಿಸ್ಕವರಿ ವಾಹಿನಿಗಳ ಮುಖ್ಯಸ್ಥರನ್ನು ಸನ್ಮಾನಿಸಲಾಗುತ್ತದೆ.

ಇದರ ಜತೆಗೆ ಪ್ರತಿನಿಧಿ ಪತ್ರಿಕೆಯ ಸಿ.ಕೆ.ಮಹೇಂದ್ರ, ವಿಜಯ ಕರ್ನಾಟಕ ಪತ್ರಿಕೆಯ ಚೀ.ಜ.ರಾಜೀವ, ವಿಜಯವಾಣಿ ಪತ್ರಿಕೆಯ ಎಂ.ಆರ್.ಸತ್ಯನಾರಾಯಣ, ಟಿವಿ 9ನ ರಾಮ್, ಆಂದೋಲನ ಪತ್ರಿಕೆಯ ರಮೇಶ್ ನಾಯಕ, ನ್ಯೂಸ್ ಫಸ್ಟ್’ನ ರವಿ ಪಾಂಡವಪುರ, ದೂರದರ್ಶನದ ಬಿ.ಜೆ.ಜಯಂತ್, ವಿಸ್ತಾರ ನ್ಯೂಸ್’ನ ರಂಗಸ್ವಾಮಿ ಎಂ. ಮಾದಾಪುರ, ಪವರ್ ಟಿವಿಯ ಬಿ.ಸುರೇಶ್ ಅವರನ್ನು ಸನ್ಮಾನಿಸಲಾಗುತ್ತದೆ.

ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ನ್ಯೂಸ್ ಫಸ್ಟ್ ಮುಖ್ಯಸ್ಥ ರವಿಕುಮಾರ್, ನೆಟ್ ವರ್ಕ್ 18 ಮುಖ್ಯಸ್ಥ ಡಿ.ಪಿ.ಸತೀಶ್. ಟಿವಿ9 ಕನ್ನಡದ ವ್ಯವಸ್ಥಾಪಕ ಸಂಪಾದಕ ಆರ್.ಶ್ರೀಧರನ್ ಇತರರು ಪಾಲ್ಗೊಳ್ಳಲಿದ್ದಾರೆ.