Tuesday, August 11, 2026

BDA Apartments

Home Front Page ಬಾದಾಮಿಯಿಂದ ಸ್ಪರ್ಧಿಸಲು ಸಿದ್ಧರಾಮಯ್ಯಗೆ ಧೈರ್ಯವಿಲ್ಲ- ಮಾಜಿ ಸಿಎಂ ಬಿಎಸ್ ವೈ ವಾಗ್ದಾಳಿ.

ಬಾದಾಮಿಯಿಂದ ಸ್ಪರ್ಧಿಸಲು ಸಿದ್ಧರಾಮಯ್ಯಗೆ ಧೈರ್ಯವಿಲ್ಲ- ಮಾಜಿ ಸಿಎಂ ಬಿಎಸ್ ವೈ ವಾಗ್ದಾಳಿ.

ಬೆಂಗಳೂರು,ಫೆಬ್ರವರಿ,22,2023(www.justkannada.in):  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ಧ ಬಾದಾಮಿ ಕ್ಷೇತ್ರವನ್ನ ಬಿಟ್ಟು ಮಾಜಿ ಸಿಎಂ ಸಿದ್ಧರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಲು ಮುಂದಾಗಿರುವ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿಎಸ್ ವೈ, ಬಾದಾಮಿಯಿಂದ ಸ್ಪರ್ಧಿಸಲು  ಸಿದ್ಧರಾಮಯ್ಯಗೆ ಧೈರ್ಯವಿಲ್ಲ. ಗೆದ್ದ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿಲ್ಲವಾ..? ಜನ ಹೇಗೆ ನಿಮ್ಮನ್ನ ನಂಬುತ್ತಾರೆ. ಬಾದಾಮಿಯಲ್ಲಿ ಸ್ಪರ್ಧಿಸಿದ್ರೆ ಜನರ ಋಣ ತೀರಿಸಬಹುದು ಎಂದು ಹೇಳಿದರು.

ಬಿಎಸ್ ವೈಗೆ  ಬಿಜೆಪಿ ಅನ್ಯಾಯ ಮಾಡಿದೆ ಅಂತಾರೆ. ನನಗೆ ಕೊಟ್ಟಷ್ಟು ಅವಕಾಶ ಯಾರಿಗೂ ಕೊಟ್ಟಿಲ್ಲ ಬಿಜೆಪಿ ಅವಕಾಶ ಕೊಟ್ಟಿದ್ದಕ್ಕೆ ನಾನು ನಾಲ್ಕು ಬಾರಿ ಸಿಎಂ ಆಗಿದ್ಧೆ. ಯಡಿಯೂರಪ್ಪ ಸುಮ್ಮನೆ ಕುಳಿತುಕೊಂಡಿಲ್ಲ. ಸೂರ್ಯ ಚಂದ್ರ ಇರುವವರೆಗೂ ಬಿಜೆಪಿ ಗೆಲುವು ಸಾಧಿಸುತ್ತದೆ. ನಾನು ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡುವೆ ಎಂದರು.

ಬಜೆಟ್ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಸಿದ್ದರಾಂಯ್ಯ ಮಾತು ಗಮನಿಸಿದ್ದೇನೆ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ ಎಂದರು.

Key words: Siddaramaiah -contest –Badami-Former CM -BS Yeddyurappa