Thursday, August 20, 2026

BDA Apartments

Home Front Page ಜೆಡಿಎಸ್ ಮತ್ತು ಬಿಜೆಪಿ ದುಡ್ಡು ಕೊಟ್ಟರೇ ಬೇಡ ಎನ್ನಬೇಡಿ: ಅದನ್ನ ಪಡೆದು ಕಾಂಗ್ರೆಸ್ ಗೆ ವೋಟ್...

ಜೆಡಿಎಸ್ ಮತ್ತು ಬಿಜೆಪಿ ದುಡ್ಡು ಕೊಟ್ಟರೇ ಬೇಡ ಎನ್ನಬೇಡಿ: ಅದನ್ನ ಪಡೆದು ಕಾಂಗ್ರೆಸ್ ಗೆ ವೋಟ್ ಹಾಕಿ- ಡಿಕೆ ಶಿವಕುಮಾರ್.

ಚಾಮರಾಜನಗರ,ಫೆಬ್ರವರಿ,21,2023(www.justkannada.in): ಜೆಡಿಎಸ್ ಮತ್ತು ಬಿಜೆಪಿಯವರು ದುಡ್ಡು ಕೊಟ್ಟರೇ ಬೇಡ ಎನ್ನಬೇಡಿ. ಅದನ್ನ ಪಡೆದು ಕಾಂಗ್ರೆಸ್ ಗೆ ವೋಟ್ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಹೇಳಿದರು.

ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ ಶಿವಕುಮಾರ್, ಶಾಸಕನಾಗುವುದು ಮುಖ್ಯವಲ್ಲ. ಏನು ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯ . ಕ್ಷೇತ್ರದ ಜನರಿಗೆ ಏನು ಮಾಡುತ್ತೇವೆ ಎಂಬುದು ಮುಖ್ಯ. ಮಹದೇಶ್ವರ ವರ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಕೊಡುತ್ತಾನೆ. ನಿಮ್ಮ ಶಾಸಕರು ಮಾಜಿ ಸಂಸದರು ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ .ಅಧಿಕಾರಕ್ಕೆ ಬಂದಾಗ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಪ್ರತಿಮನೆ ಮನೆಗೆ ತಲುಪಬೇಕು.  ಹೆಚ್ಚು ಕಾರ್ಡ್ ವಿತರಣೆ ಮಾಡುವವರೆಗೆ ಟಿವಿ ಗಿಫ್ಟ್ ಕೊಡುತ್ತೇವೆ.   10 ಜನರಿಗೆ ಟಿವಿ ಗಿಫ್ಟ್ ಕೊಡುತ್ತೇವೆ ಎಂದ ಡಿಕೆ ಶಿವಕುಮಾರ್ ಹೇಳಿದರು.

Key words: JDS – BJP – money- vote – Congress – DK Shivakumar.