Saturday, August 15, 2026

BDA Apartments

Home Cinema ಅನುಷ್ಕಾ ಬಾಯಲ್ಲಿ ಕನ್ನಡ ಪದ ಕೇಳಿ ಖುಷ್ ಆದ ಟ್ವಿಟ್ಟಿಗರು !

ಅನುಷ್ಕಾ ಬಾಯಲ್ಲಿ ಕನ್ನಡ ಪದ ಕೇಳಿ ಖುಷ್ ಆದ ಟ್ವಿಟ್ಟಿಗರು !

ಮುಂಬೈ, ಆಗಸ್ಟ್ 23, 2019 (www.justkannada.in): ನಟಿ ಅನುಷ್ಕಾ ಶರ್ಮಾ ಅವರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋಗೆ ಕನ್ನಡಿಗರು ಖುಷ್ ಆಗಿದ್ದಾರೆ.

ಈ ವಿಡೀಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನುಷ್ಕಾ ಶರ್ಮಾರ ಕನ್ನಡ ಪ್ರೀತಿಗೆ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.

ಅನುಷ್ಕಾ ಶರ್ಮಾ ಟ್ವೀಟರ್ ನಲ್ಲಿ , ಸಾಮಾಜಿಕ ಜಾಲತಾಣಗಳಲ್ಲಿ ಋಣಾತ್ಮಕ ಅಂಶಗಳೇ ಬಹುಬೇಗ ಸ್ಥಾನವನ್ನು ಆವರಿಸಿಬಿಡುತ್ತವೆ. ಹೀಗಾಗಿ ಅಂತರ್ಜಾಲದಲ್ಲಿನ ಧನಾತ್ಮಕ ಅಂಶಗಳ ಸಮಯ ಎಂದು ಟ್ವೀಟ್ ಮಾಡಿ ವಿಡಿಯೋ ಶೇರ್ ಮಾಡಿಕೊಂಡಿದ್ದರು.

ಪಾಸಿಟಿವ್ ಅಂಶಗಳಿರುವ ಟ್ವೀಟ್ ಗಳನ್ನು ಓದಿದ್ದಾರೆ. ಇನ್ನೇನು ಕೊನೆಯ ಟ್ವೀಟ್ ಓದಿ ಮುಗಿಸುತ್ತಿರುವಾಗ ದಟ್ಸ್ ಇಟ್ ಎಂದು ಹೇಳುವ ಬದಲು ಅಷ್ಟೇ ಎಂದು ಹೇಳಿದ್ದಾರೆ.

ಕನ್ನಡದ ಒಂದು ಪದವನ್ನಷ್ಟೇ ಹೇಳಿದರೂ ಅನುಷ್ಕಾರ ಕನ್ನಡದ ಮೇಲಿನ ಪ್ರೀತಿಎಗೆ ಕನ್ನಡಿಗರು ಫುಲ್ ಫಿದಾ ಆಗಿದ್ದಾರೆ.