Monday, September 28, 2026

BDA Apartments

ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆಗೆ ರಾಜ್ಯ ಕಾಂಗ್ರೆಸ್ ನವರೇ ಕಾರಣ- ಕಾಂಗ್ರೆ...
Home Front Page ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆಗೆ ರಾಜ್ಯ ಕಾಂಗ್ರೆಸ್ ನವರೇ ಕಾರಣ- ಕಾಂಗ್ರೆಸ್ ವಿರುದ್ದ ಹೆಚ್.ಡಿ ದೇವೇಗೌಡರಿಂದ ಮತ್ತೆ...

ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆಗೆ ರಾಜ್ಯ ಕಾಂಗ್ರೆಸ್ ನವರೇ ಕಾರಣ- ಕಾಂಗ್ರೆಸ್ ವಿರುದ್ದ ಹೆಚ್.ಡಿ ದೇವೇಗೌಡರಿಂದ ಮತ್ತೆ ವಾಗ್ದಾಳಿ…

ಬೆಂಗಳೂರು,ಆ,23,2019(www.justkannada.in):  ಹೆಚ್.ಡಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಜ್ಯ ಕಾಂಗ್ರೆಸ್ ನವರೇ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ದೇವೇಗೌಡರು,  ಹೆಚ್.ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ನವರು ಕೊಟ್ಟ ಕಾಟ ಎಷ್ಟು ಅಂತಾ ನನಗೆ ಗೊತ್ತು. ನನ್ನ ಮುಂದೆ ಕಣ್ಣೀರು ಹಾಕಿ ರಾಜೀನಾಮೆ ಕೊಡ್ತೀನಿ ಅಂದಿದ್ರು. ಆಗ ನಾನು ರಾಜೀನಾಮೆ ಬೇಡ ಎಂದು ಹೇಳಿದ್ದೆ. ಅಂದು ನಾನು ರಾಜೀನಾಮೆ ಕೊಡಿಸಿದ್ರೆ ಇಂದು ನನ್ನ ಮೇಲೆ ಸರ್ಕಾರ ಬೀಳಿಸಿದ ಅಪವಾದ ಬರುತ್ತಿತ್ತು ಎಂದು ಹೇಳಿದರು.

ಕಾಂಗ್ರೆಸ್ ನವರು ಕೊಡ್ತಿದ್ದ ಕಾಟ ಹಿಂಸೆಯನ್ನ ತಡೆದುಕೊಂಡು ನಾನು ಊಟ ಮಾಡ್ತಿದ್ದೆ.   ಕಾಂಗ್ರೆಸ್ ಕೊಟ್ಟ ಕಾಟ ಹಿಂಸೆ ತಡೆದುಕೊಂಡಿದ್ದೇವೆ. ಸರ್ಕಾರ ಬಿದ್ದು ಹೋದ ಮೇಲೆ ಇದನ್ನ ಹೇಳುತ್ತಿದ್ದೇವೆ. ಕಾಂಗ್ರೆಸ್ ಕುತಂತ್ರದ ಬಗ್ಗೆ ಅವತ್ತೇ ಹೇಳೋಕೆ ಆಗುತ್ತಿತ್ತಾ…? ಎಂದು ಪ್ರಶ್ನಿಸಿದರು.

ನನ್ನ ಮೊಮ್ಮಗನ ಸೋಲಿಗೆ ಸಿದ್ಧರಾಮಯ್ಯ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಆರೋಪ ಮಾಡಿದ್ದರು. ಇದೀಗ ಮತ್ತೆ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.

Key words: resignation – HD Kumaraswamy -reason – Congress-former prime minister HD Deve Gowda.