Saturday, August 8, 2026

BDA Apartments

Home Crime ಗೋಮಾಂಸ ಸಾಗಿಸುತ್ತಿದ್ದ ವಾಹನದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ದಾಳಿ…

ಗೋಮಾಂಸ ಸಾಗಿಸುತ್ತಿದ್ದ ವಾಹನದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ದಾಳಿ…

ಬೆಂಗಳೂರು,ಆ,23,2019(www.justkannada.in):  ಗೋ ಮಾಂಸ ತುಂಬಿಕೊಂಡು ಬರುತ್ತಿದ್ದ ವಾಹನದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ  ನಡೆಸಿ ವಾಹನವನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ.

ದೊಡ್ಡಬಳ್ಳಾಪುರ ಕಡೆಯಿಂದ ಬೆಂಗಳೂರಿಗೆ ದಂಧೆಕೋರರು ಗೋ ಮಾಂಸ ಸಾಗಿಸುತ್ತಿದ್ದರು. ಈ ವೇಳೆ ಯಲಹಂಕ ಉತ್ತರ ತಾಲೂಕಿನ  ರಾಜನಕುಂಟೆ ಬಳಿ  ಹಿಂದೂ ಜಾಗರಣ ವೇದಿಕೆ ಸದಸ್ಯರು ವಾಹನವನ್ನ ತಡೆದಿದ್ದಾರೆ. ಬಳಿಕ ವಾಹನವನ್ನ ಪೋಲಿಸರ ವಶಕ್ಕೆ ನೀಡಿದ್ದಾರೆ.

ದಂಧೆಕೋರರು ಆಂದ್ರದ ಹಿಂದೂಪುರದಿಂದ ಬನ್ನೇರುಘಟ್ಟಕ್ಕೆ ಗೋ ಮಾಂಸ ಸಾಗಿಸುತ್ತಿದ್ದರು. ಇದೀಗ ಗೋಮಾಸದ ವಾಹನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: Hindu jagarana vedike-Attack – Beef –Carrying- Vehicle-bangalore